1 ರಾಜರು 8

ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--

1 Kings 8:15 (UKJV) And he said, Blessed be the LORD God of Israel, which spoke with his mouth unto David my father, and has with his hand fulfilled it, saying,

13ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.

14ಅರಸನು ತನ್ನ ಮುಖವನ್ನು ತಿರುಗಿಸಿ ಇಸ್ರಾಯೇ ಲಿನ ಸಭೆಯನ್ನೆಲ್ಲಾ ಆಶೀರ್ವದಿಸಿದನು. (ಇಸ್ರಾ ಯೇಲಿನ ಸಭೆಯೆಲ್ಲಾ ನಿಂತಿರುವಾಗ)

15ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--

16ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದ ದಿನ ಮೊದಲು ಗೊಂಡು ನನ್ನ ನಾಮವು ಅದರಲ್ಲಿ ಇರುವ ನಿಮಿತ್ತ ಮಂದಿರವನ್ನು ಕಟ್ಟುವದಕ್ಕೆ ಇಸ್ರಾಯೇಲಿನ ಸಮಸ್ತ ಗೋತ್ರಗಳೊಳಗಿಂದ ಪಟ್ಟಣವನ್ನು ನಾನು ಆದು ಕೊಳ್ಳದೆ ನನ್ನ ಜನರಾದ ಇಸ್ರಾಯೇಲಿನ ಮೇಲೆ ಇರಲು ನಾನು ದಾವೀದನನ್ನು ಆದುಕೊಂಡೆನು ಅಂದನು.

17ಇಸ್ರಾಯೇಲಿನ ದೇವರಾದ ಕರ್ತನ ನಾಮಕ್ಕೆ ಮಂದಿರವನ್ನು ಕಟ್ಟಬೇಕೆಂದು ನನ್ನ ತಂದೆ ಯಾದ ದಾವೀದನಿಗೆ ಮನಸ್ಸಿತ್ತು.

Kannada Bible (Old Version), Bible Society of India.