1 ಸಾಮುವೇಲು 1

ಅವನಿಗೆ ಇಬ್ಬರು ಹೆಂಡತಿಯರಿದ್ದರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು, ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.

1 Samuel 1:2 (UKJV) And he had two wives; the name of the one was Hannah, and the name of the other Peninnah: and Peninnah had children, but Hannah had no children.

1ಎಫ್ರಾಯಾಮ್‌ ಬೆಟ್ಟದಲ್ಲಿರುವ ರಾಮಾತಯಿಮ್‌ ಚೊಫೀಮನಲ್ಲಿ ಎಲ್ಕಾನನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾ ಯಾಮ್ಯನಾದ ಚೂಫನ ಮೊಮ್ಮಗನೂ ತೋಹು ವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು.

2ಅವನಿಗೆ ಇಬ್ಬರು ಹೆಂಡತಿಯರಿದ್ದರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು, ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.

3ಅವನು ಸೈನ್ಯಗಳ ಕರ್ತ ನನ್ನು ಆರಾಧಿಸುವದಕ್ಕೂ ಆತನಿಗೆ ಬಲಿಯನ್ನು ಅರ್ಪಿಸುವದಕ್ಕೂ ಪ್ರತಿ ವರುಷ ತನ್ನ ಪಟ್ಟಣದಿಂದ ಶೀಲೋವಿಗೆ ಹೋಗುತ್ತಿದ್ದನು. ಕರ್ತನ ಯಾಜಕ ರಾದ ಹೊಫ್ನಿಯೂ ಫೀನೆಹಾಸನೂ ಎಂಬ ಏಲಿಯ ಮಕ್ಕಳಿಬ್ಬರು ಅಲ್ಲಿ ಇದ್ದರು.

4ಎಲ್ಕಾನನು ಬಲಿಯನ್ನು ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿಯಾದ ಪೆನಿನ್ನಳಿಗೂ ಅವಳ ಎಲ್ಲಾ ಕುಮಾರರಿಗೂ ಕುಮಾರ್ತೆ ಯರಿಗೂ ಪಾಲನ್ನು ಕೊಟ್ಟನು.

Kannada Bible (Old Version), Bible Society of India.