2ಅವನಿಗೆ ಇಬ್ಬರು ಹೆಂಡತಿಯರಿದ್ದರು. ಒಬ್ಬಳ ಹೆಸರು ಹನ್ನ, ಮತ್ತೊಬ್ಬಳ ಹೆಸರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ದರು, ಆದರೆ ಹನ್ನಳಿಗೆ ಮಕ್ಕಳಿರಲಿಲ್ಲ.
3ಅವನು ಸೈನ್ಯಗಳ ಕರ್ತ ನನ್ನು ಆರಾಧಿಸುವದಕ್ಕೂ ಆತನಿಗೆ ಬಲಿಯನ್ನು ಅರ್ಪಿಸುವದಕ್ಕೂ ಪ್ರತಿ ವರುಷ ತನ್ನ ಪಟ್ಟಣದಿಂದ ಶೀಲೋವಿಗೆ ಹೋಗುತ್ತಿದ್ದನು. ಕರ್ತನ ಯಾಜಕ ರಾದ ಹೊಫ್ನಿಯೂ ಫೀನೆಹಾಸನೂ ಎಂಬ ಏಲಿಯ ಮಕ್ಕಳಿಬ್ಬರು ಅಲ್ಲಿ ಇದ್ದರು.
4ಎಲ್ಕಾನನು ಬಲಿಯನ್ನು ಅರ್ಪಿಸುವ ಕಾಲದಲ್ಲಿ ಅವನು ತನ್ನ ಹೆಂಡತಿಯಾದ ಪೆನಿನ್ನಳಿಗೂ ಅವಳ ಎಲ್ಲಾ ಕುಮಾರರಿಗೂ ಕುಮಾರ್ತೆ ಯರಿಗೂ ಪಾಲನ್ನು ಕೊಟ್ಟನು.
5ಹನ್ನಳಿಗೆ ಯೋಗ್ಯ ವಾದ ಪಾಲನ್ನು ಕೊಟ್ಟು ಹನ್ನಳನ್ನು ಪ್ರೀತಿಮಾಡಿ ದನು. ಆದರೆ ಕರ್ತನು ಅವಳ ಗರ್ಭವನ್ನು ಮುಚ್ಚಿ ದ್ದನು.
6ಕರ್ತನು ಅವಳ ಗರ್ಭವನ್ನು ಮುಚ್ಚಿದ್ದರಿಂದ ಅವಳ ವಿರೋಧಿಯಾದವಳು ಅವಳಿಗೆ ಮನಗುಂದುವ ಹಾಗೆ ಬಹಳವಾಗಿ ಕೆಣಕಿ ಬಾಧಿಸಿದಳು.