7ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ--ನಿನ್ನ ಹೃದಯದಲ್ಲಿ ಇರುವದನ್ನೆಲ್ಲಾ ಮಾಡು, ನಡೆ; ಇಗೋ, ನಿನ್ನ ಹೃದಯಕ್ಕೆ ಸರಿಯಾಗಿ ನಾನೂ ನಿನ್ನ ಸಂಗಡ ಇದ್ದೇನೆ ಅಂದನು.
8ಆಗ ಯೋನಾತಾನನುಇಗೋ, ನಾವು ಆ ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು.
9ಅವರು--ನಾವು ನಿಮ್ಮ ಬಳಿಗೆ ಬರುವ ವರೆಗೆ ಸುಮ್ಮನೆ ನಿಲ್ಲಿರೆಂದು ನಮ್ಮ ಸಂಗಡ ಹೇಳಿದರೆ ನಾವು ಅವರ ಬಳಿಗೆ ಹೋಗದೆ ನಮ್ಮ ಸ್ಥಳದಲ್ಲಿ ನಿಲ್ಲುವೆವು.
10ಒಂದು ವೇಳೆ ಅವರುನಮ್ಮ ಬಳಿಗೆ ಬನ್ನಿರಿ ಎಂದು ಹೇಳಿದರೆ ಹೋಗುವೆವು. ಕರ್ತನು ಅವರನ್ನು ನಮ್ಮ ಕೈಗೆ ಒಪ್ಪಿಸಿ ಕೊಟ್ಟನೆಂಬದಕ್ಕೆ ಇದೇ ನಮಗೆ ಗುರುತಾಗಿರುವದು ಅಂದನು.
11ಹಾಗೆಯೇ ಅವರಿಬ್ಬರೂ ಫಿಲಿಷ್ಟಿಯರ ಠಾಣದ ವರಿಗೆ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರುಇಗೋ, ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ರಿಯರು ಹೊರಟು ಬರುತ್ತಾರೆಂದರು.