14ಆದರೆ ದಾವೀದನು ಚಿಕ್ಕವನಾ ಗಿದ್ದನು. ಹಿರಿಯರಾದ ಆ ಮೂವರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು.
15ದಾವೀದನು ಸೌಲನನ್ನು ಬಿಟ್ಟು ಬೇತ್ಲೆಹೇಮಿಗೆ ತನ್ನ ತಂದೆಯ ಕುರಿಗಳನ್ನು ಮೇಯಿಸಲು ಹೋಗಿದ್ದನು.
16ಫಿಲಿಷ್ಟಿಯನು ಉದ ಯದಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.
17ಇಷಯನು ತನ್ನ ಮಗನಾದ ದಾವೀದನಿಗೆನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ ಈ ಹತ್ತು ರೊಟ್ಟಿಗಳನ್ನೂ ತಕ್ಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಓಡಿ ಹೋಗು.
18ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಸಾವಿರಕ್ಕೆ ಪ್ರಧಾನನಾದವನಿಗೆ ಕೊಟ್ಟು ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ ಅವರ ಗುರುತನ್ನು ತಕ್ಕೊಂಡು ಬಾ ಅಂದನು.