9(ಪೂರ್ವದಲ್ಲಿ ಇಸ್ರಾಯೇಲಿನಲ್ಲಿ ಯಾವನಾದರೂ ದೇವರ ಹತ್ತಿರ ವಿಚಾರಿಸಬೇಕಾದರೆ--ದೀರ್ಘ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ ಅನ್ನುವನು.) ಯಾಕಂದರೆ ಈ ಕಾಲದಲ್ಲಿ ಪ್ರವಾದಿ ಎಂದು ಕರೆಯಲ್ಪ ಟ್ಟವನು ಪೂರ್ವಕಾಲದಲ್ಲಿ ದೀರ್ಘದರ್ಶಿ ಎಂದು ಕರೆಯಲ್ಪಡುತ್ತಿದ್ದನು.
10ಆಗ ಸೌಲನು ಸೇವಕನಿಗೆನಿನ್ನ ಮಾತು ಒಳ್ಳೇದು; ನಾವು ಹೋಗೋಣ ಬಾ ಅಂದನು. ಅವರು ದೇವರ ಮನುಷ್ಯನಿದ್ದ ಆ ಪಟ್ಟಣಕ್ಕೆ ಹೋದರು.
11ಅವರು ದಿನ್ನೆಯನ್ನು ಹತ್ತಿ ಪಟ್ಟಣ ದೊಳಗೆ ಹೋಗುವಾಗ ನೀರು ಸೇದಲು ಬರುವ ಹುಡುಗಿಯರನ್ನು ನೋಡಿ -- ದರ್ಶಿಯು ಇಲ್ಲಿ ಇದ್ದಾನೋ? ಎಂದು ಅವರನ್ನು ಕೇಳಿದರು.
12ಅವರು ಇವರಿಗೆ ಪ್ರತ್ಯುತ್ತರವಾಗಿ--ಅವನು ಇದ್ದಾನೆ; ಇಗೋ, ನಿಮ್ಮ ಮುಂದೆ ಇದ್ದಾನೆ; ಬೇಗ ಹೋಗಿರಿ; ಯಾಕಂದರೆ ಈ ಹೊತ್ತು ಗುಡ್ಡದ ಮೇಲೆ ಜನರು ಬಲಿಯನ್ನು ಅರ್ಪಿಸುವದರಿಂದ ಅವನು ಪಟ್ಟಣಕ್ಕೆ ಬಂದಿದ್ದಾನೆ.
13ನೀವು ಪಟ್ಟಣದೊಳಗೆ ಪ್ರವೇಶಿಸುತ್ತಲೇ ತಿನ್ನುವದಕ್ಕೆ ಗುಡ್ಡದ ಮೇಲೆ ಹೋಗುವದಕ್ಕಿಂತ ಮುಂಚೆ ಅವನನ್ನು ಕಂಡುಕೊಳ್ಳುವಿರಿ. ಅವನು ಬರುವ ವರೆಗೂ ಜನರು ತಿನ್ನುವದಿಲ್ಲ. ಅವನು ಅರ್ಪಣೆಯನ್ನು ಆಶೀರ್ವದಿಸು ತ್ತಾನೆ; ತರುವಾಯ ಕರೆಯಲ್ಪಟ್ಟವರು ತಿನ್ನುತ್ತಾರೆ. ಈಗಲೇ ಹೋಗಿರಿ, ಈ ವೇಳೆಯಲ್ಲಿ ಅವನನ್ನು ಕಂಡು ಕೊಳ್ಳುವಿರಿ ಅಂದರು.