1 ಸಾಮುವೇಲು 9

ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದರಿಂದ ಅವನು ತನ್ನ ಮಗನಾದ ಸೌಲ ನಿಗೆ--ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರಕೊಂಡು ಕತ್ತೆಗಳನ್ನು ಹುಡುಕಲು ಹೋಗಬೇಕು ಅಂದನು.

1 Samuel 9:3 (UKJV) And the asses of Kish Saul's father were lost. And Kish said to Saul his son, Take now one of the servants with you, and arise, go seek the asses.

1ಆದರೆ ಬೆನ್ಯಾವಿಾನನ ವಂಶದವನಾದ ಕೀಷನೆಂಬ ಒಬ್ಬ ಮನುಷ್ಯನಿದ್ದನು. ಇವನು ಅಬೀಯೇಲನ ಮಗನು, ಇವನು ಚೆರೋರನ ಮಗನು, ಇವನು ಬೆಕೋರತನ ಮಗನು, ಇವನು ಅಫೀಹನ ಮಗನು ಇವನು ಪರಾಕ್ರಮಶಾಲಿಯಾಗಿ ದ್ದನು.

2ಇವನಿಗೆ ಒಳ್ಳೇ ಯೌವನಸ್ಥ ನಾದ ಸೌಲನೆಂಬ ಹೆಸರುಳ್ಳ ಒಬ್ಬ ಸುಂದರನಾದ ಮಗನಿದ್ದನು. ಇಸ್ರಾ ಯೇಲ್‌ ಮಕ್ಕಳಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದವನಾಗಿದ್ದನು.

3ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದರಿಂದ ಅವನು ತನ್ನ ಮಗನಾದ ಸೌಲ ನಿಗೆ--ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರಕೊಂಡು ಕತ್ತೆಗಳನ್ನು ಹುಡುಕಲು ಹೋಗಬೇಕು ಅಂದನು.

4ಹಾಗೆಯೇ ಅವನು ಎಫ್ರಾಯಾಮ್‌ ಬೆಟ್ಟವನ್ನೂ ಶಾಲೀಷಾ ದೇಶವನ್ನೂ ದಾಟಿಹೋದನು; ಆದರೆ ಅವು ಸಿಕ್ಕಲಿಲ್ಲ. ಅವನು ಶಾಲೀಮ್‌ ದೇಶವನ್ನು ಹಾದುಹೋದನು; ಅಲ್ಲಿಯೂ ಅವುಗಳು ಇಲ್ಲದೆ ಹೋದವು. ಅವನು ಬೆನ್ಯಾವಿಾನನ ದೇಶವನ್ನು ದಾಟಿ ದರೂ ಅವುಗಳನ್ನು ಕಾಣದೆ ಹೋದನು.

5ಅವರು ಚೂಫ್‌ ಎಂಬ ದೇಶಕ್ಕೆ ಬಂದಾಗ ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ--ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು ನಮಗೋಸ್ಕರ ಚಿಂತೆಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ ಅಂದನು.

Kannada Bible (Old Version), Bible Society of India.