2ಇವನಿಗೆ ಒಳ್ಳೇ ಯೌವನಸ್ಥ ನಾದ ಸೌಲನೆಂಬ ಹೆಸರುಳ್ಳ ಒಬ್ಬ ಸುಂದರನಾದ ಮಗನಿದ್ದನು. ಇಸ್ರಾ ಯೇಲ್ ಮಕ್ಕಳಲ್ಲಿ ಅವನಿಗಿಂತ ಸೌಂದರ್ಯವುಳ್ಳವನು ಒಬ್ಬನೂ ಇರಲಿಲ್ಲ. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದವನಾಗಿದ್ದನು.
3ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆ ಹೋದದರಿಂದ ಅವನು ತನ್ನ ಮಗನಾದ ಸೌಲ ನಿಗೆ--ನೀನೆದ್ದು ಕೆಲಸದವರಲ್ಲಿ ಒಬ್ಬನನ್ನು ನಿನ್ನ ಸಂಗಡ ಕರಕೊಂಡು ಕತ್ತೆಗಳನ್ನು ಹುಡುಕಲು ಹೋಗಬೇಕು ಅಂದನು.
4ಹಾಗೆಯೇ ಅವನು ಎಫ್ರಾಯಾಮ್ ಬೆಟ್ಟವನ್ನೂ ಶಾಲೀಷಾ ದೇಶವನ್ನೂ ದಾಟಿಹೋದನು; ಆದರೆ ಅವು ಸಿಕ್ಕಲಿಲ್ಲ. ಅವನು ಶಾಲೀಮ್ ದೇಶವನ್ನು ಹಾದುಹೋದನು; ಅಲ್ಲಿಯೂ ಅವುಗಳು ಇಲ್ಲದೆ ಹೋದವು. ಅವನು ಬೆನ್ಯಾವಿಾನನ ದೇಶವನ್ನು ದಾಟಿ ದರೂ ಅವುಗಳನ್ನು ಕಾಣದೆ ಹೋದನು.
5ಅವರು ಚೂಫ್ ಎಂಬ ದೇಶಕ್ಕೆ ಬಂದಾಗ ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ--ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು ನಮಗೋಸ್ಕರ ಚಿಂತೆಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ ಅಂದನು.
6ಅದಕ್ಕವನು--ಇಗೋ, ಈ ಪಟ್ಟಣ ದಲ್ಲಿ ದೇವರ ಮನುಷ್ಯನೊಬ್ಬನಿದ್ದಾನೆ; ಅವನು ಗೌರವ ವುಳ್ಳ ಮನುಷ್ಯನು. ಅವನು ಹೇಳುವದೆಲ್ಲಾ ನಿಶ್ಚಯ ವಾಗಿ ಆಗುವದು. ಈಗ ನಾವು ಅಲ್ಲಿಗೆ ಹೋಗೋಣ; ಒಂದು ವೇಳೆ, ನಾವು ಹೋಗಬೇಕೆಂದಿರುವ ನಮ್ಮ ಮಾರ್ಗವನ್ನು ಅವನು ತಿಳಿಸುವನು ಅಂದನು.