4ಹಾಗೆಯೇ ಅವನು ಎಫ್ರಾಯಾಮ್ ಬೆಟ್ಟವನ್ನೂ ಶಾಲೀಷಾ ದೇಶವನ್ನೂ ದಾಟಿಹೋದನು; ಆದರೆ ಅವು ಸಿಕ್ಕಲಿಲ್ಲ. ಅವನು ಶಾಲೀಮ್ ದೇಶವನ್ನು ಹಾದುಹೋದನು; ಅಲ್ಲಿಯೂ ಅವುಗಳು ಇಲ್ಲದೆ ಹೋದವು. ಅವನು ಬೆನ್ಯಾವಿಾನನ ದೇಶವನ್ನು ದಾಟಿ ದರೂ ಅವುಗಳನ್ನು ಕಾಣದೆ ಹೋದನು.
5ಅವರು ಚೂಫ್ ಎಂಬ ದೇಶಕ್ಕೆ ಬಂದಾಗ ಸೌಲನು ತನ್ನ ಸಂಗಡ ಇದ್ದ ಸೇವಕನಿಗೆ--ನನ್ನ ತಂದೆಯು ಕತ್ತೆಗಳ ಮೇಲೆ ಇರುವ ಚಿಂತೆಯನ್ನು ಬಿಟ್ಟು ನಮಗೋಸ್ಕರ ಚಿಂತೆಪಡದ ಹಾಗೆ ನಾವು ಹಿಂದಕ್ಕೆ ಹೋಗೋಣ ಬಾ ಅಂದನು.
6ಅದಕ್ಕವನು--ಇಗೋ, ಈ ಪಟ್ಟಣ ದಲ್ಲಿ ದೇವರ ಮನುಷ್ಯನೊಬ್ಬನಿದ್ದಾನೆ; ಅವನು ಗೌರವ ವುಳ್ಳ ಮನುಷ್ಯನು. ಅವನು ಹೇಳುವದೆಲ್ಲಾ ನಿಶ್ಚಯ ವಾಗಿ ಆಗುವದು. ಈಗ ನಾವು ಅಲ್ಲಿಗೆ ಹೋಗೋಣ; ಒಂದು ವೇಳೆ, ನಾವು ಹೋಗಬೇಕೆಂದಿರುವ ನಮ್ಮ ಮಾರ್ಗವನ್ನು ಅವನು ತಿಳಿಸುವನು ಅಂದನು.
7ಆಗ ಸೌಲನು ತನ್ನ ಸೇವಕನಿಗೆ--ಇಗೋ, ನಾವು ಆ ಮನುಷ್ಯನ ಬಳಿಗೆ ಹೋದರೆ ಏನು ತಕ್ಕೊಂಡು ಹೋಗುವದು? ಯಾಕಂದರೆ ನಮ್ಮ ಹಸಿಬೆಗಳಲ್ಲಿ ಇರುವ ರೊಟ್ಟಿ ಮುಗಿದುಹೋಯಿತು. ದೇವರ ಮನುಷ್ಯನ ಬಳಿಗೆ ತಕ್ಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ; ನಮ್ಮ ಬಳಿಯಲ್ಲಿ ಏನದೆ ಅಂದನು.
8ಅದಕ್ಕೆ ಆ ಸೇವಕನು ಸೌಲನಿಗೆ ಪ್ರತ್ಯುತ್ತರವಾಗಿ--ಇಗೋ, ನನ್ನ ಕೈಯಲ್ಲಿ ಕಾಲು ಶೆಕೇಲು ಬೆಳ್ಳಿ ಅದೆ; ದೇವರ ಮನುಷ್ಯನು ನಮಗೆ ಮಾರ್ಗವನ್ನು ತಿಳಿಸುವ ಹಾಗೆ ನಾನು ಅದನ್ನು ಅವನಿಗೆ ಕೊಡುವೆನು ಅಂದನು.