2 ಉತ್ತರಕಾಲವೃತ್ತಾಂತ 12

ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ ಏನಾಯಿ ತಂದರೆ, ಅವನೂ ಅವನ ಸಂಗಡ ಸಮಸ್ತ ಇಸ್ರಾ ಯೇಲ್ಯರೂ ಕರ್ತನ ನ್ಯಾಯಪ್ರಮಾಣವನ್ನು ಬಿಟ್ಟು ಬಿಟ್ಟರು.

2 Chronicles 12:1 (UKJV) And it came to pass, when Rehoboam had established the kingdom, and had strengthened himself, he forsook the law of the LORD, and all Israel with him.

1ರೆಹಬ್ಬಾಮನು ರಾಜ್ಯವನ್ನು ಸ್ಥಿರಮಾಡಿ ತನ್ನನ್ನು ಬಲಪಡಿಸಿಕೊಂಡಾಗ ಏನಾಯಿ ತಂದರೆ, ಅವನೂ ಅವನ ಸಂಗಡ ಸಮಸ್ತ ಇಸ್ರಾ ಯೇಲ್ಯರೂ ಕರ್ತನ ನ್ಯಾಯಪ್ರಮಾಣವನ್ನು ಬಿಟ್ಟು ಬಿಟ್ಟರು.

2ರೆಹಬ್ಬಾಮನು ಅರಸನಾದ ಐದನೇ ವರುಷ ದಲ್ಲಿ ಏನಾಯಿತಂದರೆ, ಅವರು ಕರ್ತನಿಗೆ ವಿರೋಧ ವಾಗಿ ಅಪರಾಧ ಮಾಡಿದ್ದರಿಂದ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಬಂದನು.

3ಅವನ ಸಂಗಡ ಸಾವಿರದ ಇನ್ನೂರು ರಥಗಳೂ ಅರವತ್ತು ಸಾವಿರ ರಾಹುತರೂ ಇದ್ದರು. ಇದಲ್ಲದೆ ತನ್ನ ಸಂಗಡ ಐಗುಪ್ತದಿಂದ ಬಂದ ಲೂಬ್ಯರೂ ಸುಕ್ಕೀಯರೂ ಕೂಷ್ಯರೂ ಲೆಕ್ಕವಿಲ್ಲದಷ್ಟು ಇದ್ದರು.

Kannada Bible (Old Version), Bible Society of India.