2 ಉತ್ತರಕಾಲವೃತ್ತಾಂತ 16

ಆಸನ ಆಳ್ವಿಕೆಯ ಮೂವತ್ತಾರನೇ ವರುಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂ ದದ ಅರಸನಾದ ಆಸನ ಬಳಿಗೆ ಯಾರೂ ಹೊರಟು ಹೋಗುವದಕ್ಕೂ ಒಳಗೆ ಬರುವದಕ್ಕೂ ಆಗದ ಹಾಗೆ ರಾಮವನ್ನು ಕಟ್ಟಿಸಿದನು.

2 Chronicles 16:1 (UKJV) In the six and thirtieth year of the reign of Asa Baasha king of Israel came up against Judah, and built Ramah, to the intent that he might let none go out or come in to Asa king of Judah.

1ಆಸನ ಆಳ್ವಿಕೆಯ ಮೂವತ್ತಾರನೇ ವರುಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂ ದದ ಅರಸನಾದ ಆಸನ ಬಳಿಗೆ ಯಾರೂ ಹೊರಟು ಹೋಗುವದಕ್ಕೂ ಒಳಗೆ ಬರುವದಕ್ಕೂ ಆಗದ ಹಾಗೆ ರಾಮವನ್ನು ಕಟ್ಟಿಸಿದನು.

2ಆಗ ಆಸನು ಕರ್ತನ ಆಲಯದ ಬೊಕ್ಕಸಗಳಿಂದಲೂ ಅರಸನ ಮನೆಯ ಬೊಕ್ಕಸದಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿ ವಾಸವಾಗಿರುವ ಅರಾಮಿನ ಅರಸನಾದ ಬೆನ್ಹದದನ ಬಳಿಗೆ ಕಳುಹಿಸಿ ಅವನಿಗೆ--ನನ್ನ ತಂದೆಗೂ ನಿನ್ನ ತಂದೆಗೂ ಇದ್ದ ಹಾಗೆ ನನಗೂ ನಿನಗೂ ಒಡಂಬಡಿಕೆ ಉಂಟು.

3ಇಗೋ, ನಾನು ಬೆಳ್ಳಿಬಂಗಾರ ವನ್ನು ನಿನಗೆ ಕಳುಹಿಸಿದ್ದೇನೆ; ಇಸ್ರಾಯೇಲಿನ ಅರಸ ನಾದ ಬಾಷನು ನನ್ನನ್ನು ಬಿಟ್ಟುಹೋಗುವ ಹಾಗೆ ನೀನು ಹೋಗಿ ಅವನ ಸಂಗಡ ಮಾಡಿದ ಒಡಂಬಡಿ ಕೆಯನ್ನು ಮುರಿಯಬೇಕು ಎಂದು ಹೇಳಿದನು.

Kannada Bible (Old Version), Bible Society of India.