2 ಉತ್ತರಕಾಲವೃತ್ತಾಂತ 2

ಸೊಲೊ ಮೋನನು ಇಸ್ರಾಯೇಲ್‌ ದೇಶದಲ್ಲಿದ್ದ ಅನ್ಯದೇಶ ಸ್ಥರನ್ನು ಲೆಕ್ಕಿಸಿದನು; ತನ್ನ ತಂದೆಯಾದ ದಾವೀದನು ಅವರನ್ನು ಲೆಕ್ಕಿಸಿದ ತರುವಾಯ ತಾನೂ ಲೆಕ್ಕಿಸಿದನು; ಅವರು ಲಕ್ಷದ ಐವತ್ತಮೂರು ಸಾವಿರದ ಆರುನೂರು ಮಂದಿ ಕಂಡುಬಂದರು.

2 Chronicles 2:17 (UKJV) And Solomon numbered all the strangers that were in the land of Israel, after the numbering wherewith David his father had numbered them; and they were found an hundred and fifty thousand and three thousand and six hundred.

15ಈಗ ನನ್ನ ಒಡೆಯನು ಹೇಳಿದ ಆ ಗೋಧಿಯನ್ನೂ ಜವೆಗೋಧಿಯನ್ನೂ ಎಣ್ಣೆಯನ್ನೂ ದ್ರಾಕ್ಷಾ ರಸವನ್ನೂ ತನ್ನ ಸೇವಕರಿಗೆ ಕಳುಹಿಸಲಿ.

16ನಾವು ಲೆಬನೋನಿನಲ್ಲಿ ನಿನಗೆ ಬೇಕಾದಷ್ಟು ಮರಗಳನ್ನು ಕಡಿದು ತೆಪ್ಪಗಳಲ್ಲಿ ಸಮುದ್ರದ ಮಾರ್ಗವಾಗಿ ಯೊಪ್ಪಕ್ಕೆ ತಕ್ಕೊಂಡು ಬರುತ್ತೇವೆ; ನೀನು ಅವುಗ ಳನ್ನು ಯೆರೂಸಲೇಮಿಗೆ ಒಯ್ಯಬಹುದು.

17ಸೊಲೊ ಮೋನನು ಇಸ್ರಾಯೇಲ್‌ ದೇಶದಲ್ಲಿದ್ದ ಅನ್ಯದೇಶ ಸ್ಥರನ್ನು ಲೆಕ್ಕಿಸಿದನು; ತನ್ನ ತಂದೆಯಾದ ದಾವೀದನು ಅವರನ್ನು ಲೆಕ್ಕಿಸಿದ ತರುವಾಯ ತಾನೂ ಲೆಕ್ಕಿಸಿದನು; ಅವರು ಲಕ್ಷದ ಐವತ್ತಮೂರು ಸಾವಿರದ ಆರುನೂರು ಮಂದಿ ಕಂಡುಬಂದರು.

18ಅವರಲ್ಲಿ ಎಪ್ಪತ್ತು ಸಾವಿರ ಮಂದಿಯನ್ನು ಹೊರೆಹೊರುವದಕ್ಕೂ ಎಂಭತ್ತು ಸಾವಿರ ಮಂದಿಯನ್ನು ಬೆಟ್ಟದಲ್ಲಿ ಕಲ್ಲು ಕಡಿಯುವ ದಕ್ಕೂ ಮೂರು ಸಾವಿರದ ಆರು ನೂರು ಮಂದಿ ಯನ್ನು ಕೆಲಸದವರ ಮೇಲೆ ಮೇಲ್ವಿಚಾರಣೆಗಾಗಿಯೂ ಇರಿಸಿದನು.

Kannada Bible (Old Version), Bible Society of India.