33ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;
34ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
35ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು.
36ಇದಲ್ಲದೆ ತಾರ್ಷಿ ಷಿಗೆ ಹೋಗುವ ನಿಮಿತ್ತ ಹಡಗುಗಳನ್ನು ಮಾಡಿಸಲು ಅವನ ಸಂಗಡ ಸೇರಿಕೊಂಡನು. ಅವರು ಎಚ್ಯೋನ್ಗೆಬೆ ರಿನಲ್ಲಿ ಹಡಗುಗಳನ್ನು ಮಾಡಿಸಿದನು.
37ಆಗ ಮಾರೇ ಷಾದವನಾಗಿರುವ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧ ವಾಗಿ ಪ್ರವಾದಿಸಿ--ನೀನು ಅಹಜ್ಯನ ಸಂಗಡ ಸೇರಿ ಕೊಂಡಿದ್ದರಿಂದ ಕರ್ತನು ನಿನ್ನ ಕ್ರಿಯೆಗಳನ್ನು ಹಾಳು ಮಾಡಿಬಿಟ್ಟನೆಂದು ಹೇಳಿದನು. ಹಡಗುಗಳು ತಾರ್ಷಿ ಷಿಗೆ ಹೋಗ ಕೂಡದ ಹಾಗೆ ಒಡೆಯಲ್ಪಟ್ಟವು.