1ಅಮಚ್ಯನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನಳು; ಈಕೆಯು ಯೆರೂಸಲೇಮಿನವಳಾಗಿದ್ದಳು.
2ಅವನು ಕರ್ತನ ಸಮ್ಮುಖದಲ್ಲಿ ಸರಿಯಾದದ್ದನ್ನು ಮಾಡಿದನು; ಆದರೆ ಪೂರ್ಣಹೃದಯದಿಂದಲ್ಲ.
3ರಾಜ್ಯವು ಅವನಿಗೆ ಸ್ಥಿರಮಾಡಲ್ಪಟ್ಟ ತರುವಾಯ ಅವನು ಅರಸನಾದ ತನ್ನ ತಂದೆಯನ್ನು ಸಂಹರಿಸಿದ ತನ್ನ ಸೇವಕರನ್ನು ಕೊಂದುಹಾಕಿದನು.
4ಆದರೆ ತಂದೆಗಳು ಮಕ್ಕಳಿ ಗೋಸ್ಕರ ಸಾಯುವದಿಲ್ಲ, ಮಕ್ಕಳು ತಂದೆಗಳಿಗೋಸ್ಕರ ಸಾಯುವದಿಲ್ಲ; ಪ್ರತಿ ಮನುಷ್ಯನು ತನ್ನ ಪಾಪದಲ್ಲಿ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ್ದು ಮೋಶೆಯ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಅವನು ಅವರ ಮಕ್ಕಳನ್ನು ಕೊಲ್ಲಲಿಲ್ಲ.