2 ಉತ್ತರಕಾಲವೃತ್ತಾಂತ 25

ಆದರೆ ಅಮಚ್ಯನ ಮಿಕ್ಕಾದ ಕ್ರಿಯೆಗಳು, ಮೊದಲನೆಯವು ಗಳೂ ಕಡೆಯವುಗಳೂ ಇಗೋ, ಅವು ಯೆಹೂದ ಇಸ್ರಾಯೇಲ್ಯರ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

2 Chronicles 25:26 (UKJV) Now the rest of the acts of Amaziah, first and last, behold, are they not written in the book of the kings of Judah and Israel?

24ಅವನು ಓಬೇದೆದೋಮನ ಬಳಿಯಲ್ಲಿ ಕರ್ತನ ಆಲಯದಲ್ಲಿ ಸಿಕ್ಕಿದ ಬೆಳ್ಳಿ ಬಂಗಾ ರವನ್ನು ಎಲ್ಲಾ ಸಾಮಾನುಗಳನ್ನು ಅರಸನ ಮನೆಯ ಬೊಕ್ಕಸಗಳನ್ನು ಕೆಲವರನ್ನು ಸೆರೆಹಿಡಿದು ತೆಗೆದು ಕೊಂಡು ಸಮಾರ್ಯಕ್ಕೆ ತಿರುಗಿಹೋದರು.

25ಯೆಹೂದದ ಅರಸನಾಗಿರುವ ಯೋವಾಷನ ಮಗನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೋವಾಷನು ಸತ್ತ ಮೇಲೆ ಹದಿನೈದು ವರುಷ ಬದುಕಿದನು.

26ಆದರೆ ಅಮಚ್ಯನ ಮಿಕ್ಕಾದ ಕ್ರಿಯೆಗಳು, ಮೊದಲನೆಯವು ಗಳೂ ಕಡೆಯವುಗಳೂ ಇಗೋ, ಅವು ಯೆಹೂದ ಇಸ್ರಾಯೇಲ್ಯರ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

27ಆದರೆ ಅಮಚ್ಯನು ಕರ್ತನ ಕಡೆಯಿಂದ ತೊಲಗಿಹೋದ ತರುವಾಯ ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದರು. ಆದ ಕಾರಣ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅವನ ಹಿಂದೆ ಲಾಕೀಷಿಗೆ ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು.

28ಅವರು ಅವನನ್ನು ಕುದುರೆಗಳ ಮೇಲೆ ತಕ್ಕೊಂಡು ಬಂದು ಯೆಹೂದದ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಅವನನ್ನು ಹೂಣಿಟ್ಟರು.

Kannada Bible (Old Version), Bible Society of India.