2 ಉತ್ತರಕಾಲವೃತ್ತಾಂತ 26

ಇದಲ್ಲದೆ ಅಮ್ಮೋನ್ಯರು ಉಜ್ಜೀಯನಿಗೆ ಕಾಣಿಕೆ ಗಳನ್ನು ಕೊಟ್ಟರು. ಆದದರಿಂದ ಅವನ ಹೆಸರು ಐಗುಪ್ತದ ಮೇರೆಯ ವರೆಗೂ ಬಹಳವಾಗಿ ಹಬ್ಬಿತು. ಅವನು ತನ್ನನ್ನು ಬಹಳವಾಗಿ ಬಲಪಡಿಸಿಕೊಂಡನು.

2 Chronicles 26:8 (UKJV) And the Ammonites gave gifts to Uzziah: and his name spread abroad even to the entering in of Egypt; for he strengthened himself exceedingly.

6ಅವನು ಹೊರಟುಹೋಗಿ ಫಿಲಿಷ್ಟಿಯರ ಮೇಲೆ ಯುದ್ಧಮಾಡಿ ಗತ್‌ ಗೋಡೆಯನ್ನೂ ಯಬ್ನೆಯ ಗೋಡೆಯನ್ನೂ ಅಷ್ಡೋದಿನ ಗೋಡೆಯನ್ನೂ ಕೆಡವಿ ಬಿಟ್ಟು ಫಿಲಿಷ್ಟಿಯರ ಮಧ್ಯದಲ್ಲಿ ಅಷ್ಡೋ ದಿನ ಬಳಿಯಲ್ಲಿ ಪಟ್ಟಣಗಳನ್ನು ಕಟ್ಟಿಸಿದನು.

7ಇದ ಲ್ಲದೆ ಫಿಲಿಷ್ಟಿಯರ ಮೇಲೆಯೂ ಗೂರ್‌ಬಾಳಿನಲ್ಲಿ ವಾಸವಾಗಿದ್ದ ಅರಬ್ಬಿಯರ ಮೇಲೆಯೂ ಮೆಗೂನ್ಯರ ಮೇಲೆಯೂ ಅವನು ಯುದ್ಧಮಾಡಿ ದಾಗ ದೇವರು ಅವನಿಗೆ ಸಹಾಯಕೊಟ್ಟನು.

8ಇದಲ್ಲದೆ ಅಮ್ಮೋನ್ಯರು ಉಜ್ಜೀಯನಿಗೆ ಕಾಣಿಕೆ ಗಳನ್ನು ಕೊಟ್ಟರು. ಆದದರಿಂದ ಅವನ ಹೆಸರು ಐಗುಪ್ತದ ಮೇರೆಯ ವರೆಗೂ ಬಹಳವಾಗಿ ಹಬ್ಬಿತು. ಅವನು ತನ್ನನ್ನು ಬಹಳವಾಗಿ ಬಲಪಡಿಸಿಕೊಂಡನು.

9ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆ ಬಾಗಲ ಬಳಿಯಲ್ಲಿಯೂ ತಗ್ಗಿನ ಬಾಗಲ ಬಳಿಯಲ್ಲಿಯೂ ಕೋಟೆಯ ಮೂಲೆಯಲ್ಲಿಯೂ ಬುರುಜುಗಳನ್ನು ಕಟ್ಟಿಸಿ ಅವುಗಳನ್ನು ಬಲಪಡಿಸಿದನು.

10ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.

Kannada Bible (Old Version), Bible Society of India.