12ಆಗ ಎಫ್ರಾಯಾಮನ ಮಕ್ಕಳ ಶ್ರೇಷ್ಠರಲ್ಲಿ ಕೆಲವರಾಗಿರುವ ಯೆಹೋಹಾನಾನನ ಮಗನಾದ ಅಜರ್ಯನೂ ಮೆಷಿ ಲ್ಲೇಮೋತನ ಮಗನಾದ ಬೆರಕ್ಯನೂ ಶಲ್ಲೂಮನ ಮಗನಾದ ಹಿಜ್ಕಿಯನೂ ಹದ್ಲೈಯನ ಮಗನಾದ ಅಮಾಸನೂ ಯುದ್ಧದಿಂದ ಬಂದವರಿಗೆ ವಿರೋಧ ವಾಗಿ ಎದ್ದು
13ಅವರಿಗೆ--ನೀವು ಸೆರೆಯವರನ್ನು ಇಲ್ಲಿಗೆ ತರಬೇಡಿರಿ ಎಂದು ಹೇಳಿದರು; ಯಾಕಂದರೆ ನಾವು ಕರ್ತನಿಗೆ ವಿರೋಧವಾಗಿ ಅಪರಾಧ ಮಾಡಿ ದ್ದೇವೆ. ನೀವು ನಮ್ಮ ಪಾಪಗಳನ್ನೂ ಅಪರಾಧಗಳನ್ನೂ ಹೆಚ್ಚಿಸಬೇಕೆಂದಿದ್ದೀರಿ. ನಿಶ್ಚಯವಾಗಿ ನಮ್ಮ ಅಪರಾ ಧವು ದೊಡ್ಡದಾಗಿದೆ; ಇಸ್ರಾಯೇಲಿನ ಮೇಲೆ ಉಗ್ರ ಕೋಪವು ಉಂಟಾಯಿತು ಅಂದರು.
14ಆಗ ಸೈನ್ಯದ ವರು ಸೆರೆಯವರನ್ನೂ ಕೊಳ್ಳೆಯನ್ನೂ ಪ್ರಧಾನರ ಮುಂದೆಯೂ ಸಮಸ್ತ ಕೂಟದ ಮುಂದೆಯೂ ಬಿಟ್ಟು ಬಿಟ್ಟರು.
15ಆಗ ಹೆಸರಿನಿಂದ ಹೇಳಲ್ಪಟ್ಟ ಆ ಮನು ಷ್ಯರು ಎದ್ದು ಸೆರೆಯವರನ್ನು ತೆಗೆದುಕೊಂಡು ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವದಕ್ಕೂ ಕುಡಿಯುವದಕ್ಕೂ ಕೊಟ್ಟು ಅವರ ತಲೆಗಳಿಗೆ ಎಣ್ಣೆ ಯನ್ನು ಹಚ್ಚಿ ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ಕರಕೊಂಡು ಹೋಗಿ ಸಮಾರ್ಯಕ್ಕೆ ಹಿಂತಿರುಗಿದರು.
16ಅದೇ ಕಾಲದಲ್ಲಿ ಅರಸನಾದ ಆಹಾಜನು ಅಶ್ಶೂ ರಿನ ಅರಸುಗಳ ಬಳಿಗೆ ಕಳುಹಿಸಿ ಸಹಾಯ ಬೇಡಿ ಕೊಂಡನು.