11ಆಗ ಹಿಜ್ಕೀಯನು ಕರ್ತನ ಮನೆಯಲ್ಲಿ ಉಗ್ರಾಣಗಳನ್ನು ಸಿದ್ಧಮಾಡಲು ಹೇಳಿದನು.
12ಅವರು ಅವುಗಳನ್ನು ಸಿದ್ಧಮಾಡಿದ ಮೇಲೆ ಕಾಣಿಕೆಗಳನ್ನೂ ದಶಮಾಂಶ ವನ್ನೂ ಪ್ರತಿಷ್ಠಿಸಲ್ಪಟ್ಟವುಗಳನ್ನೂ ನಂಬಿಕೆಯಾಗಿ ಒಳಗೆ ತಂದರು. ಇವುಗಳ ಮೇಲೆ ಲೇವಿಯನಾದ ಕೋನನ್ಯನು ಅಧಿಕಾರಿಯಾಗಿದ್ದನು. ಅವನ ತರು ವಾಯ ಸಹೋದರನಾದ ಶಿಮ್ಮಿಯು ಅಧಿಕಾರಿಯಾಗಿ ದ್ದನು.
13ಇದಲ್ಲದೆ ಅರಸನಾದ ಹಿಜ್ಕೀಯನ ಅಪ್ಪಣೆ ಯಿಂದಲೂ ದೇವರ ಆಲಯದ ಅಧಿಕಾರಿಯಾದ ಅಜರ್ಯನ ಅಪ್ಪಣೆಯಿಂದಲೂ ಯೆಹೀಯೇಲನೂ ಅಜಜ್ಯನೂ ನಹತನೂ ಅಸಾಹೇಲನೂ ಯೆರೀಮೋ ತನೂ, ಯೋಜಾಬಾದನೂ, ಎಲೀಯೇಲನೂ, ಇಸ್ಮ ಕ್ಯನೂ ಮಹತನೂ ಬೆನಾಯನೂ ಇವರು ಕೋನನ್ಯನ ಅವನ ಸಹೋದರನಾದ ಶಿಮ್ಮಿಯ ಕೈಕೆಳಗೆ ವಿಚಾರಣಾ ಕರ್ತರಾಗಿದ್ದರು.
14ಇದಲ್ಲದೆ ಲೇವಿಯನಾಗಿರುವ ಇಮ್ನನ ಮಗನಾದ ಕೋರೆ ಎಂಬವನು ಪೂರ್ವದಿಕ್ಕಿ ನಲ್ಲಿರುವ ದ್ವಾರಪಾಲಕನು ಕರ್ತನ ಕಾಣಿಕೆಗಳನ್ನೂ ಮಹಾ ಪರಿಶುದ್ಧವಾದವುಗಳನ್ನೂ ಪಾಲು ಹಂಚುವ ದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಅರ್ಪಣೆ ಗಳ ಮೇಲೆ ಇದ್ದನು.
15ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ಸರತಿ ಸರತಿಯಾಗಿ ಹಿರಿಯರಿಗೂ ಕಿರಿಯರಿಗೂ ಪಾಲು ಹಂಚುವದಕ್ಕೆ ಎದೆನನೂ ವಿಾನ್ಯವಿಾನನೂ ಯೇಷೂವನೂ ಶೆಮಾ ಯನೂ ಅಮರ್ಯನೂ ಶೆಕನ್ಯನೂ ಇದ್ದರು.