14ಇದಲ್ಲದೆ ಲೇವಿಯನಾಗಿರುವ ಇಮ್ನನ ಮಗನಾದ ಕೋರೆ ಎಂಬವನು ಪೂರ್ವದಿಕ್ಕಿ ನಲ್ಲಿರುವ ದ್ವಾರಪಾಲಕನು ಕರ್ತನ ಕಾಣಿಕೆಗಳನ್ನೂ ಮಹಾ ಪರಿಶುದ್ಧವಾದವುಗಳನ್ನೂ ಪಾಲು ಹಂಚುವ ದಕ್ಕೆ ದೇವರಿಗೆ ಉಚಿತಾರ್ಥವಾಗಿ ಅರ್ಪಿಸಿದ ಅರ್ಪಣೆ ಗಳ ಮೇಲೆ ಇದ್ದನು.
15ಇವನ ತರುವಾಯ ಯಾಜಕರ ಪಟ್ಟಣಗಳಲ್ಲಿ ತಮ್ಮ ಸಹೋದರರಿಗೆ ಸರತಿ ಸರತಿಯಾಗಿ ಹಿರಿಯರಿಗೂ ಕಿರಿಯರಿಗೂ ಪಾಲು ಹಂಚುವದಕ್ಕೆ ಎದೆನನೂ ವಿಾನ್ಯವಿಾನನೂ ಯೇಷೂವನೂ ಶೆಮಾ ಯನೂ ಅಮರ್ಯನೂ ಶೆಕನ್ಯನೂ ಇದ್ದರು.
16ಲೆಕ್ಕ ದಲ್ಲಿ ಬರೆಯಲ್ಪಟ್ಟ ಮೂರು ವರುಷ ಪ್ರಾಯ ಮೊದಲು ಗೊಂಡು ಮೇಲಿರುವ ಗಂಡು ಮಕ್ಕಳು ಹೊರತಾಗಿ ಕರ್ತನ ಮನೆಯಲ್ಲಿ ಪ್ರವೇಶಿಸುವವರೆಲ್ಲರಿಗೆ ಅವರ ಕೆಲಸಗಳಲ್ಲಿ ಅವರ ಸರತಿಗಳ ಪ್ರಕಾರ ಅವರ ಸೇವೆಗೆ ಅವರವರ ದಿನದ ಭಾಗವನ್ನು ಕೊಡುವದಕ್ಕೂ
17ಹಾಗೆಯೇ ಇಪ್ಪತ್ತು ವರುಷ ಪ್ರಾಯ ಮೊದಲು ಗೊಂಡು ಅವರ ತಂದೆಗಳ ಮನೆಯ ಹಾಗೆ ಬರೆಯ ಲ್ಪಟ್ಟ ಅವರವರ ಕೆಲಸಗಳಲ್ಲಿಯೂ ಅವರವರ ಸರತಿ ಗಳಲ್ಲಿಯೂ ಇರುವ ಯಾಜಕರಿಗೂ ಲೇವಿಯ ರಿಗೂ
18ಅವರ ಸಮಸ್ತ ಕೂಟದಲ್ಲಿ ಲೆಕ್ಕದೊಳಗೆ ಬರೆ ಯಲ್ಪಟ್ಟ ಅವರ ಚಿಕ್ಕವರಿಗೂ ಹೆಂಡತಿಯರಿಗೂ ಕುಮಾರರಿಗೂ ಕುಮಾರ್ತೆಯರಿಗೂ ಕೊಡುವದಕ್ಕೆ ಇದ್ದರು. ಅವರು ತಮ್ಮ ಉದ್ಯೋಗದಲ್ಲಿ ತಮ್ಮನ್ನು ಪರಿಶುದ್ಧತೆಯಲ್ಲಿ ಪರಿಶುದ್ಧ ಮಾಡಿಕೊಂಡರು.