14ತರುವಾಯ ತಮಗೋಸ್ಕ ರವೂ ಯಾಜಕರಿಗೋಸ್ಕರವೂ ಸಿದ್ಧಮಾಡಿದರು. ಯಾಕಂದರೆ ಆರೋನನ ಮಕ್ಕಳಾದ ಯಾಜಕರು ರಾತ್ರಿಯ ಪರ್ಯಂತರ ದಹನ ಬಲಿಗಳನ್ನೂ ಕೊಬ್ಬನ್ನೂ ಅರ್ಪಿಸುವದರಲ್ಲಿದ್ದರು. ಆದದರಿಂದ ಲೇವಿಯರು ತಮಗೋಸ್ಕರವೂ ಆರೋನನ ಮಕ್ಕಳಾದ ಯಾಜಕರಿ ಗೋಸ್ಕರವೂ ಸಿದ್ಧಮಾಡಿದರು.
15ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.
16ಹೀಗೆಯೇ ಅರಸನಾದ ಯೋಷೀಯನ ಆಜ್ಞೆಯ ಪ್ರಕಾರ ಪಸ್ಕ ವನ್ನು ಆಚರಿಸುವದಕ್ಕೂ ಕರ್ತನ ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸುವದಕ್ಕೂ ಅದೇ ದಿವಸ ದಲ್ಲಿ ಕರ್ತನ ಸೇವೆಯು ಸಿದ್ಧವಾಯಿತು.
17ಸಿದ್ಧವಾಗಿದ್ದ ಇಸ್ರಾಯೇಲಿನ ಮಕ್ಕಳು ಆ ಕಾಲದಲ್ಲಿ ಪಸ್ಕವನ್ನೂ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನೂ ಏಳು ದಿವಸ ಆಚರಿಸಿದರು.
18ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.