17ಸಿದ್ಧವಾಗಿದ್ದ ಇಸ್ರಾಯೇಲಿನ ಮಕ್ಕಳು ಆ ಕಾಲದಲ್ಲಿ ಪಸ್ಕವನ್ನೂ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನೂ ಏಳು ದಿವಸ ಆಚರಿಸಿದರು.
18ಪ್ರವಾದಿಯಾದ ಸಮುವೇಲನ ದಿವಸಗಳು ಮೊದಲುಗೊಂಡು ಇಸ್ರಾಯೇಲಿನಲ್ಲಿ ಇಂಥಾ ಪಸ್ಕವನ್ನು ಆಚರಿಸಿದ್ದಿಲ್ಲ. ಇಸ್ರಾಯೇಲಿನ ಸಮಸ್ತ ಅರಸುಗಳಲ್ಲಿ ಯೋಷೀಯನೂ ಯಾಜಕರೂ ಲೇವಿಯರೂ ಸಿದ್ಧವಾಗಿದ್ದ ಯೆಹೂದ ಇಸ್ರಾಯೇಲ್ಯ ರೆಲ್ಲರೂ ಯೆರೂಸಲೇಮಿನ ನಿವಾಸಿಗಳೂ ಆಚರಿಸಿದ ಪಸ್ಕದ ಹಾಗೆ ಯಾರೂ ಆಚರಿಸಲಿಲ್ಲ.
19ಯೋಷೀ ಯನ ಆಳಿಕೆಯ ಹದಿನೆಂಟನೇ ವರುಷದಲ್ಲಿ ಈ ಪಸ್ಕವು ಆಚರಿಸಲ್ಪಟ್ಟಿತು.
20ಇದೆಲ್ಲಾ ಆದ ತರುವಾಯ ಯೋಷೀಯನು ಮಂದಿರವನ್ನು ಸಿದ್ಧಮಾಡಿದ ಮೇಲೆ ಐಗುಪ್ತದ ಅರಸ ನಾದ ನೆಕೋ ಯೂಫ್ರೇಟೀಸ್ ಬಳಿಯಲ್ಲಿ ಕರ್ಕೆವಿಾ ಷಿಗೆ ಯುದ್ಧ ಮಾಡಲು ಬಂದನು;
21ಯೋಷೀಯನು ಅವನ ಮೇಲೆ ಯುದ್ಧಕ್ಕೆ ಹೋದನು. ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ--ಯೆಹೂದದ ಅರಸನೇ, ನನಗೆ ನಿನಗೆ ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ, ನಾನು ಯುದ್ಧಮಾಡುವ ಮನೆಯ ಮೇಲೆ ಬರುತ್ತೇನೆ; ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾನೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶ ಮಾಡದ ಹಾಗೆ ನೀನು ಆತನ ಮುಂದೆ ಸುಮ್ಮನಿರು.