1ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸವಾಗಿರುವೆನೆಂದು ಕರ್ತನು ಹೇಳಿದ್ದಾನೆ.
2ಆದರೆ ನಿನಗೆ ನಿವಾಸದ ಆಲಯವನ್ನೂ ನೀನು ಯುಗಯುಗಾಂತರಗಳಿಗೂ ವಾಸಮಾಡತಕ್ಕ ಸ್ಥಾನವನ್ನೂ ನಾನು ಕಟ್ಟಿಸಿದ್ದೇನೆ ಅಂದನು.
3ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
4ಅವನು--ನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿದ್ದನ್ನು ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲ್ಯರ ದೇವರಾದ ಕರ್ತನು ಸ್ತುತಿಸಲ್ಪಡಲಿ.