20ನಿನ್ನ ಸೇವಕನು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಯನ್ನು ನೀನು ಕೇಳುವ ಹಾಗೆ ಅಲ್ಲಿ ನನ್ನ ಹೆಸರು ಇರುವದೆಂದು ನೀನು ಹೇಳಿದ ಈ ಸ್ಥಳದ ಮೇಲೆಯೂ ಈ ಆಲಯದ ಮೇಲೆಯೂ ಹಗಲಿರುಳು ನಿನ್ನ ಕಣ್ಣುಗಳು ತೆರೆದಿರಲಿ.
21ಇದಲ್ಲದೆ ನೀನು ನಿನ್ನ ಸೇವಕನ ವಿಜ್ಞಾಪನೆಯನ್ನೂ ನಿನ್ನ ಜನರಾದ ಇಸ್ರಾಯೇಲ್ಯರ ವಿಜ್ಞಾಪನೆಯನ್ನೂ ಕೇಳು. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ ನೀನು ವಾಸಮಾಡುವ ಸ್ಥಳವಾದ ಆಕಾಶದಿಂದ ಕೇಳು, ಕೇಳಿ ಮನ್ನಿಸು.
22ಯಾವನಾದರೂ ತನ್ನ ನೆರೆಯವ ನಿಗೆ ವಿರೋಧವಾಗಿ ಪಾಪಮಾಡಿ ಅವನು ಆಣೆಇಡಬೇಕೆಂದು ನೇಮಿಸಲು
23ಈ ಆಲಯದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆ ಬಂದರೆ ನೀನೇ ದುಷ್ಟನ ಮಾರ್ಗವನ್ನು ಅವನ ತಲೆಯ ಮೇಲೆ ಬರ ಮಾಡಿ ಅವನಿಗೆ ಬದಲು ಕೊಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗಿ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ನೀನು ಆಕಾಶದಿಂದ ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
24ನಿನ್ನ ಜನರಾದ ಇಸ್ರಾಯೇಲ್ಯರು ನಿನಗೆ ವಿರೋ ಧವಾಗಿ ಪಾಪಮಾಡಿದ್ದರಿಂದ ತಮ್ಮ ಶತ್ರುವಿನ ಮುಂದೆ ಸೋತು ಹೋದಾಗ ಅವರು ತಿರುಗಿ ಈ ಆಲಯದಲ್ಲಿ ನಿನ್ನ ಮುಂದೆ ನಿನ್ನ ಹೆಸರನ್ನು ಕೊಂಡಾಡಿ