28ದೇಶದಲ್ಲಿ ಬರವು, ಜಾಡ್ಯವು, ಉರಿಗಾಳಿಯು, ಬೂದಿಯು, ಮಿಡಿತೆ, ಕಂಬಳಿಹುಳ ಇವುಗಳು ಇದ್ದರೆ ಇಲ್ಲವೆ ಅವರ ಶತ್ರುಗಳು ತಮ್ಮ ಸ್ವದೇಶದ ಪಟ್ಟಣ ಗಳಲ್ಲಿ ಅವರನ್ನು ಸಂಕಟಪಡಿಸಿದರೆ ಯಾವ ಬಾಧೆ ಯಾವ ಬೇನೆ ಇದ್ದರೂ ತನ್ನ ಬಾಧೆಯನ್ನೂ ವ್ಯಸನ ವನ್ನೂ ತಿಳಿಯುವ ಒಬ್ಬ ಮನುಷ್ಯನಾದರೂ
29ನಿನ್ನ ಜನವಾದ ಸಮಸ್ತ ಇಸ್ರಾಯೇಲಾದರೂ ಪ್ರಾರ್ಥನೆ ಯನ್ನೂ ವಿಜ್ಞಾಪನೆಯನ್ನೂ ಮಾಡಲು ಅವರು ತಮ್ಮ ಕೈಗಳನ್ನು ಈ ಆಲಯದ ಕಡೆಗೆ ಚಾಚಿದರೆ
30ನೀನು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ಬದು ಕುವ ವರೆಗೆ ಅವರು ನಿನಗೆ ಭಯಪಟ್ಟು ನಿನ್ನ ಮಾರ್ಗ ದಲ್ಲಿ ನಡೆಯುವ ಹಾಗೆ
31ನೀನು ಅಕಾಶದಿಂದ ಅಂದರೆ ನೀನು ವಾಸಮಾಡುವ ಸ್ಥಳದಿಂದ ಕೇಳಿ ಮನ್ನಿಸಿ ಮನುಷ್ಯನ ಹೃದಯವನ್ನು ತಿಳಿಯುವ ನೀನು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರಕೊಡು; ಯಾಕಂದರೆ ನೀನೊಬ್ಬನೇ ಸಮಸ್ತ ಮನುಷ್ಯ ಮಕ್ಕಳ ಹೃದಯಗಳನ್ನು ತಿಳಿದವನಾಗಿದ್ದೀ.
32ನಿನ್ನ ದೊಡ್ಡ ಹೆಸರು, ನಿನ್ನ ಬಲವಾದ ಕೈ, ಚಾಚಿದ ನಿನ್ನ ತೋಳು ಇವುಗಳ ನಿಮಿತ್ತ ನಿನ್ನ ಜನ ವಾದ ಇಸ್ರಾಯೇಲಿನವನಲ್ಲದೆ ದೂರದೇಶದಿಂದ ಬಂದ ಪರದೇಶಸ್ಥರನ್ನು ಕುರಿತು ಏನಂದರೆ,