29ನಿನ್ನ ಜನವಾದ ಸಮಸ್ತ ಇಸ್ರಾಯೇಲಾದರೂ ಪ್ರಾರ್ಥನೆ ಯನ್ನೂ ವಿಜ್ಞಾಪನೆಯನ್ನೂ ಮಾಡಲು ಅವರು ತಮ್ಮ ಕೈಗಳನ್ನು ಈ ಆಲಯದ ಕಡೆಗೆ ಚಾಚಿದರೆ
30ನೀನು ನಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ಅವರು ಬದು ಕುವ ವರೆಗೆ ಅವರು ನಿನಗೆ ಭಯಪಟ್ಟು ನಿನ್ನ ಮಾರ್ಗ ದಲ್ಲಿ ನಡೆಯುವ ಹಾಗೆ
31ನೀನು ಅಕಾಶದಿಂದ ಅಂದರೆ ನೀನು ವಾಸಮಾಡುವ ಸ್ಥಳದಿಂದ ಕೇಳಿ ಮನ್ನಿಸಿ ಮನುಷ್ಯನ ಹೃದಯವನ್ನು ತಿಳಿಯುವ ನೀನು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರಕೊಡು; ಯಾಕಂದರೆ ನೀನೊಬ್ಬನೇ ಸಮಸ್ತ ಮನುಷ್ಯ ಮಕ್ಕಳ ಹೃದಯಗಳನ್ನು ತಿಳಿದವನಾಗಿದ್ದೀ.
32ನಿನ್ನ ದೊಡ್ಡ ಹೆಸರು, ನಿನ್ನ ಬಲವಾದ ಕೈ, ಚಾಚಿದ ನಿನ್ನ ತೋಳು ಇವುಗಳ ನಿಮಿತ್ತ ನಿನ್ನ ಜನ ವಾದ ಇಸ್ರಾಯೇಲಿನವನಲ್ಲದೆ ದೂರದೇಶದಿಂದ ಬಂದ ಪರದೇಶಸ್ಥರನ್ನು ಕುರಿತು ಏನಂದರೆ,
33ಅವರು ಬಂದು ಈ ಆಲಯದಲ್ಲಿ ಪ್ರಾರ್ಥನೆ ಮಾಡಿದರೆ ನಿನ್ನ ಜನರಾದ ಇಸ್ರಾಯೇಲಿನ ಪ್ರಕಾರ ಭೂಲೋಕ ದಲ್ಲಿರುವ ಸಮಸ್ತರೂ ನಿನಗೆ ಭಯಪಟ್ಟು ನಿನ್ನ ಹೆಸ ರನ್ನು ತಿಳಿಯುವ ಹಾಗೆಯೂ ನಾನು ಕಟ್ಟಿಸಿದ ಈ ಆಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿತೆಂದು ಅವರು ತಿಳಿಯುವ ಹಾಗೆಯೂ ನೀನು ವಾಸಮಾಡುವ ಸ್ಥಳವಾದ ಆಕಾಶದಿಂದ ಕೇಳಿ ಪರದೇಶಸ್ಥನು ನಿನಗೆ ಬೇಡಿದ ಎಲ್ಲಾದರ ಹಾಗೆ ಅನುಗ್ರಹಿಸು.