31ನೀನು ಅಕಾಶದಿಂದ ಅಂದರೆ ನೀನು ವಾಸಮಾಡುವ ಸ್ಥಳದಿಂದ ಕೇಳಿ ಮನ್ನಿಸಿ ಮನುಷ್ಯನ ಹೃದಯವನ್ನು ತಿಳಿಯುವ ನೀನು ಪ್ರತಿ ಮನುಷ್ಯನಿಗೂ ಅವನವನ ಮಾರ್ಗದ ಪ್ರಕಾರಕೊಡು; ಯಾಕಂದರೆ ನೀನೊಬ್ಬನೇ ಸಮಸ್ತ ಮನುಷ್ಯ ಮಕ್ಕಳ ಹೃದಯಗಳನ್ನು ತಿಳಿದವನಾಗಿದ್ದೀ.
32ನಿನ್ನ ದೊಡ್ಡ ಹೆಸರು, ನಿನ್ನ ಬಲವಾದ ಕೈ, ಚಾಚಿದ ನಿನ್ನ ತೋಳು ಇವುಗಳ ನಿಮಿತ್ತ ನಿನ್ನ ಜನ ವಾದ ಇಸ್ರಾಯೇಲಿನವನಲ್ಲದೆ ದೂರದೇಶದಿಂದ ಬಂದ ಪರದೇಶಸ್ಥರನ್ನು ಕುರಿತು ಏನಂದರೆ,
33ಅವರು ಬಂದು ಈ ಆಲಯದಲ್ಲಿ ಪ್ರಾರ್ಥನೆ ಮಾಡಿದರೆ ನಿನ್ನ ಜನರಾದ ಇಸ್ರಾಯೇಲಿನ ಪ್ರಕಾರ ಭೂಲೋಕ ದಲ್ಲಿರುವ ಸಮಸ್ತರೂ ನಿನಗೆ ಭಯಪಟ್ಟು ನಿನ್ನ ಹೆಸ ರನ್ನು ತಿಳಿಯುವ ಹಾಗೆಯೂ ನಾನು ಕಟ್ಟಿಸಿದ ಈ ಆಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿತೆಂದು ಅವರು ತಿಳಿಯುವ ಹಾಗೆಯೂ ನೀನು ವಾಸಮಾಡುವ ಸ್ಥಳವಾದ ಆಕಾಶದಿಂದ ಕೇಳಿ ಪರದೇಶಸ್ಥನು ನಿನಗೆ ಬೇಡಿದ ಎಲ್ಲಾದರ ಹಾಗೆ ಅನುಗ್ರಹಿಸು.
34ನಿನ್ನ ಜನರು ನೀನು ಅಟ್ಟಿಬಿಡುವ ಯಾವ ಸ್ಥಳ ದಲ್ಲಾದರೂ ತಮ್ಮ ಶತ್ರುಗಳ ಸಂಗಡ ಯುದ್ಧ ಮಾಡಲು ಹೊರಟು ಹೋಗಿ ನೀನು ಆದುಕೊಂಡ ಪಟ್ಟಣದ ಮಾರ್ಗವಾಗಿಯೂ ನಾನು ನಿನ್ನ ಹೆಸರಿಗೆ ಕಟ್ಟಿಸಿದ ಈ ಆಲಯದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ
35ನೀನು ಆಕಾಶದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸು.