14ಇದಲ್ಲದೆ ಅರಬಸ್ಥಾನದ ಅರಸುಗಳೂ ದೇಶದ ಅಧಿಪತಿಗಳೂ ಸೊಲೊಮೋನನಿಗೆ ಬೆಳ್ಳಿಬಂಗಾರವನ್ನು ತಂದರು.
15ಅರಸನಾದ ಸೊಲೊಮೋನನು ಅಪರಂಜಿಯಿಂದ ಇನ್ನೂರು ಖೇಡ್ಯಗಳನ್ನು ಮಾಡಿಸಿದನು. ಒಂದೊಂದು ಖೇಡ್ಯಕ್ಕೆ ಆರುನೂರು ಶೆಕೇಲು ತೂಕ ಅಪರಂಜಿ ಇತ್ತು.
16ಹಾಗೆಯೇ ಅಪರಂಜಿಯಿಂದ ಮುನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾ ಣಿಗೆ ಮುನ್ನೂರು ಶೆಕೇಲು ಅಪರಂಜಿ ಇತ್ತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.
17ಇದಲ್ಲದೆ ಅರಸನು ದಂತದಿಂದ ದೊಡ್ಡ ಸಿಂಹಾ ಸನವನ್ನು ಮಾಡಿಸಿ ಅದನ್ನು ಅಪರಂಜಿಯಿಂದ ಹೊದಿ ಸಿದನು.
18ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳು ಇದ್ದವು. ಸಿಂಹಾಸನಕ್ಕೆ ತಗಲಿಸಲ್ಪಟ್ಟ ಬಂಗಾರದ ಪಾದ ಪೀಠ ಇತ್ತು. ಕುಳಿತುಕೊಳ್ಳುವ ಸ್ಥಳದ ಎರಡು ಪಾರ್ಶ್ವ ದಲ್ಲಿಯೂ ಕೈಗಳಿದ್ದವು; ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.