11 ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ ಒಗಟುಗಳಿಂದ ಅವನನ್ನು ಶೋಧಿಸಲು ಅವಳು ಮಹಾಗುಂಪಿನ ಸಂಗಡ ಸುಗಂಧಗಳನ್ನೂ ಬಹು ಬಂಗಾರವನ್ನೂ ಅಮೂಲ್ಯವಾದ ಕಲ್ಲುಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಅವನ ಸಂಗಡ ಮಾತಾ ಡಿದಳು.
2ಆಗ ಸೊಲೊಮೋನನು ಅವಳ ಪ್ರಶ್ನೆ ಗಳಿಗೆಲ್ಲಾ ಉತ್ತರಕೊಟ್ಟನು. ಸೊಲೊಮೋನನು ಅವ ಳಿಗೆ ಉತ್ತರ ಕೊಡದಂಥ, ಅವನಿಗೆ ಬಚ್ಚಿಡಲ್ಪಟ್ಟಿದ್ದು ಒಂದೂ ಇರಲಿಲ್ಲ.
3ಶೆಬದ ರಾಣಿಯು ಸೊಲೊ ಮೋನನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ
4ಅವನ ಮೇಜಿನ ಭೋಜನವನ್ನೂ ಅವನ ಸೇವಕರು ಕೂತಿರುವದನ್ನೂ ನಿಂತಿರುವದನ್ನೂ ಅವನ ವಸ್ತ್ರಗಳನ್ನೂ ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ ಅವನು ಕರ್ತನ ಆಲಯಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಅವಳಿಗೆ ವಿಸ್ಮಯವಾಯಿತು.