27ಅರಸನು ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲು ಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನ ಲ್ಲಿರುವ ಆಲದ ಮರಗಳ ಹಾಗೆಯೂ ಬಹಳವಾಗಿ ಮಾಡಿದನು.
28ಇದಲ್ಲದೆ ಐಗುಪ್ತದಿಂದಲೂ ಸಮಸ್ತ ದೇಶಗಳಿಂದಲೂ ಸೊಲೊಮೋನನಿಗೆ ಕುದುರೆಗಳನ್ನು ತಕ್ಕೊಂಡು ಬಂದರು.
29ಸೊಲೊಮೋನನ ಮಿಕ್ಕಾದ ಕ್ರಿಯೆಗಳು, ಮೊದ ಲನೆಯವುಗಳೂ ಕಡೆಯವುಗಳೂ ಪ್ರವಾದಿಯಾದ ನಾತಾನನ ಪುಸ್ತಕದಲ್ಲಿಯೂ ಶೀಲೋವಿನವನಾದ ಅಹೀಯನ ಪ್ರವಾದನೆಯಲ್ಲಿಯೂ ದರ್ಶಿಯಾದ ಇದ್ದೋವನು ನೆಬಾಟನ ಮಗನಾದ ಯಾರೊಬ್ಬಾಮ ನಿಗೆ ವಿರೋಧವಾಗಿ ಹೇಳಿದ ದರ್ಶನಗಳಲ್ಲಿಯೂ ಅವು ಬರೆಯಲ್ಪಟ್ಟವಲ್ಲವೋ?
30ಹೀಗೆಯೇ ಸೊಲೊ ಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇ ಲಿನ ಮೇಲೆ ನಾಲ್ವತ್ತು ವರುಷಗಳು ಆಳಿದನು.
31ಸೊಲೊಮೋನನು ತನ್ನ ಪಿತೃಗಳ ಸಂಗಡ ಮಲಗಿ ದನು; ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು. ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.