2 ಕೊರಿಂಥ 12

ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೇ ಪರಲೋಕಕ್ಕೆ ಒಯ್ಯಲ್ಪಟ್ಟನು. (ಅವನ ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನು ಹೇಳಲಾರೆನು; ದೇವರೇ ಬಲ್ಲನು.)

2 Corinthians 12:2 (UKJV) I knew a man in Christ above fourteen years ago, (whether in the body, I cannot tell; or whether out of the body, I cannot tell: God knows;) such an one caught up to the third heaven.

1ಹೆಚ್ಚಳಪಡುವದು ಹೇಗೂ ವಿಹಿತವಲ್ಲ ದಿದ್ದರೂ ಅದು ನನಗೆ ಅವಶ್ಯವಾಗಿದೆ; ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳ ಮತ್ತು ಪ್ರಕಟನೆಗಳ ವಿಷಯವಾಗಿ ಹೇಳುತ್ತೇನೆ.

2ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೇ ಪರಲೋಕಕ್ಕೆ ಒಯ್ಯಲ್ಪಟ್ಟನು. (ಅವನ ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನು ಹೇಳಲಾರೆನು; ದೇವರೇ ಬಲ್ಲನು.)

3ಅಂಥ ಮನುಷ್ಯನೊಬ್ಬನನ್ನು ನಾನು ಬಲ್ಲೆನು; (ಅವನು ದೇಹಸಹಿತನಾಗಿದ್ದನೋ ದೇಹ ರಹಿತನಾಗಿದ್ದನೋ ನಾನು ಹೇಳಲಾರೆನು, ದೇವರೇ ಬಲ್ಲನು;)

4ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯನು ನುಡಿಯಲಶಕ್ಯವಾದ ಆಡಲಾಗದ ಮಾತುಗಳನ್ನು ಕೇಳಿದನು.

Kannada Bible (Old Version), Bible Society of India.