1ಯೇಹುವಿನ ಆಳ್ವಿಕೆಯ ಏಳನೇ ವರುಷದಲ್ಲಿ ಯೆಹೋವಾಷನು ಆಳಲು ಆರಂಭಿಸಿ ಯೆರೂಸಲೇಮಿನಲ್ಲಿ ನಾಲ್ವತ್ತು ವರುಷ ಆಳಿದನು.
2ಅವನ ತಾಯಿಯು ಬೇರ್ಷೆಬ ಊರಿನವಳಾದ ಚಿಬ್ಯಳು. ಆದರೆ ಯಾಜಕನಾದ ಯೆಹೋಯಾ ದಾವನು ಯೆಹೋವಾಷನಿಗೆ ಬೋಧಿಸಿದ ಎಲ್ಲಾ ದಿವಸಗಳಲ್ಲಿ ಅವನು ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು.
3ಉನ್ನತ ಸ್ಥಳಗಳು ಮಾತ್ರ ಕೆಡವಲ್ಪಡದೆ ಇದ್ದವು; ಜನರು ಉನ್ನತ ಸ್ಥಳಗಳ ಮೇಲೆ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದರು.