2 ರಾಜರು 12

ಉನ್ನತ ಸ್ಥಳಗಳು ಮಾತ್ರ ಕೆಡವಲ್ಪಡದೆ ಇದ್ದವು; ಜನರು ಉನ್ನತ ಸ್ಥಳಗಳ ಮೇಲೆ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದರು.

2 Kings 12:3 (UKJV) But the high places were not taken away: the people still sacrificed and burnt incense in the high places.

1ಯೇಹುವಿನ ಆಳ್ವಿಕೆಯ ಏಳನೇ ವರುಷದಲ್ಲಿ ಯೆಹೋವಾಷನು ಆಳಲು ಆರಂಭಿಸಿ ಯೆರೂಸಲೇಮಿನಲ್ಲಿ ನಾಲ್ವತ್ತು ವರುಷ ಆಳಿದನು.

2ಅವನ ತಾಯಿಯು ಬೇರ್ಷೆಬ ಊರಿನವಳಾದ ಚಿಬ್ಯಳು. ಆದರೆ ಯಾಜಕನಾದ ಯೆಹೋಯಾ ದಾವನು ಯೆಹೋವಾಷನಿಗೆ ಬೋಧಿಸಿದ ಎಲ್ಲಾ ದಿವಸಗಳಲ್ಲಿ ಅವನು ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು.

3ಉನ್ನತ ಸ್ಥಳಗಳು ಮಾತ್ರ ಕೆಡವಲ್ಪಡದೆ ಇದ್ದವು; ಜನರು ಉನ್ನತ ಸ್ಥಳಗಳ ಮೇಲೆ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದರು.

4ಆಗ ಯೆಹೋವಾಷನು ಯಾಜಕರಿಗೆ--ಕರ್ತನ ಮನೆಗೆ ತರಲ್ಪಟ್ಟ ಪ್ರತಿಷ್ಠಿತವಾದವುಗಳ ಹಣವೆಲ್ಲ ವನ್ನೂ ಹಾದು ಹೋಗುವ ಪ್ರತಿ ಮನುಷ್ಯನ ಹಣ ವನ್ನೂ ಪ್ರಾಣಗಳ ಎಣಿಕೆಯ ಹಣವನ್ನೂ ಪ್ರತಿ ಮನುಷ್ಯನು ತನ್ನ ಇಚ್ಚೆಯ ಪ್ರಕಾರ ಕರ್ತನ ಆಲಯಕ್ಕೆ ಕೊಡಬೇಕೆಂದು ತಕ್ಕೊಂಡು ಬಂದ ಹಣವೆಲ್ಲವನ್ನೂ

5ಯಾಜಕರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಪರಿಚಯ ದವರಿಂದ ತಕ್ಕೊಂಡು ಆಲಯದಲ್ಲಿ ಕಂಡುಬರುವ ಒಡಕುಗಳನ್ನೆಲ್ಲಾ ದುರಸ್ತುಮಾಡಲಿ ಅಂದನು.

Kannada Bible (Old Version), Bible Society of India.