11ಅವರು ಎಣಿಸಿದ ಹಣವನ್ನು ಕರ್ತನ ಮನೆಯ ವಿಚಾರಣೆಯ ಕೆಲಸ ಮಾಡುವವರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಕರ್ತನ ಮನೆಯಲ್ಲಿ ಕೆಲಸ ಮಾಡುವ ಬಡಗಿಯವರಿಗೂ ಶಿಲ್ಪಿಗಾರರಿಗೂ ಉಪ್ಪಾರರಿಗೂ ಕಲ್ಲುಕುಟಿಗರಿಗೂ ಕೊಟ್ಟರು.
12ಇದ ಲ್ಲದೆ ಕರ್ತನ ಮನೆಯ ಒಡಕುಗಳನ್ನು ದುರಸ್ತು ಮಾಡುವದಕ್ಕೆ ಮರವನ್ನೂ ಕೆತ್ತಿದಕಲ್ಲುಗಳನ್ನೂ ತೆಗೆದು ಕೊಳ್ಳುವದಕ್ಕೂ ಮನೆ ದುರಸ್ತು ಮಾಡಲು ಬೇಕಾದ ಎಲ್ಲಾ ವೆಚ್ಚಕ್ಕಾಗಿ ಕೊಟ್ಟರು.
13ಆದರೆ ಕರ್ತನ ಮನೆ ಗೋಸ್ಕರ ಬೆಳ್ಳಿಬಟ್ಟಲುಗಳನ್ನೂ ಕತ್ತರಿಗಳನ್ನೂ ಪಾತ್ರೆ ಗಳನ್ನೂ ತುತೂರಿಗಳನ್ನೂ ಬೆಳ್ಳಿ ಬಂಗಾರದ ಸಾಮಾನು ಗಳನ್ನೂ ಕರ್ತನ ಮನೆಗೆ ತಂದ
14ಹಣದಿಂದ ಮಾಡಿ ಸದೆ ಅವರು ಅದನ್ನು ಕೆಲಸದವರಿಗೆ ಕೊಟ್ಟು ಕರ್ತನ ಮನೆಯನ್ನು ದುರಸ್ತು ಮಾಡಿಸಿದರು.
15ಇದಲ್ಲದೆ ಅವರು ಕೆಲಸ ಮಾಡುವವರಿಗೆ ಕೊಡುವದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ ಅವರಿಂದ ಲೆಕ್ಕವನ್ನು ತೆಗೆದು ಕೊಳ್ಳಲಿಲ್ಲ.