2 ರಾಜರು 12

ಅವರು ನಂಬಿಗಸ್ತರಾಗಿ ಮಾಡಿದರು. ಆದರೆ ಅಪರಾಧದ ಹಣವನ್ನೂ ಪಾಪಪರಿಹಾರದ ಹಣವನ್ನೂ ಕರ್ತನ ಮನೆಗೆ ತಕ್ಕೊಂಡು ಬರಲಿಲ್ಲ; ಅದು ಯಾಜಕರದಾಗಿತ್ತು.

2 Kings 12:16 (UKJV) The trespass money and sin money was not brought into the house of the LORD: it was the priests'.

14ಹಣದಿಂದ ಮಾಡಿ ಸದೆ ಅವರು ಅದನ್ನು ಕೆಲಸದವರಿಗೆ ಕೊಟ್ಟು ಕರ್ತನ ಮನೆಯನ್ನು ದುರಸ್ತು ಮಾಡಿಸಿದರು.

15ಇದಲ್ಲದೆ ಅವರು ಕೆಲಸ ಮಾಡುವವರಿಗೆ ಕೊಡುವದಕ್ಕೆ ಯಾರ ಕೈಯಲ್ಲಿ ಒಪ್ಪಿಸಿದ್ದರೋ ಅವರಿಂದ ಲೆಕ್ಕವನ್ನು ತೆಗೆದು ಕೊಳ್ಳಲಿಲ್ಲ.

16ಅವರು ನಂಬಿಗಸ್ತರಾಗಿ ಮಾಡಿದರು. ಆದರೆ ಅಪರಾಧದ ಹಣವನ್ನೂ ಪಾಪಪರಿಹಾರದ ಹಣವನ್ನೂ ಕರ್ತನ ಮನೆಗೆ ತಕ್ಕೊಂಡು ಬರಲಿಲ್ಲ; ಅದು ಯಾಜಕರದಾಗಿತ್ತು.

17ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್‌ ಊರಿನ ಮೇಲೆ ಯುದ್ಧಮಾಡಿ ಅದನ್ನು ವಶಪಡಿಸಿಕೊಂಡನು. ಹಜಾಯೇಲನು ಯೆರೂಸಲೇ ಮಿಗೆ ಹೋಗಲು ತನ್ನ ಮುಖವನ್ನು ತಿರುಗಿಸಿದನು.

18ಆಗ ಯೆಹೂದದ ಅರಸನಾದ ಯೆಹೋವಾಷನೂ ಯೆಹೂದದ ಅರಸುಗಳಾಗಿರುವ ತನ್ನ ತಂದೆಗಳಾದ ಯೆಹೋಷಾಫಾಟನೂ ಯೆಹೋರಾಮನೂ ಅಹ ಜ್ಯನೂ ಅರ್ಪಿಸಿದ ಎಲ್ಲಾ ಪ್ರತಿಷ್ಠಿತವಾದವುಗಳನ್ನೂ ತಾನು ಪರಿಶುದ್ಧ ಮಾಡಿದವುಗಳನ್ನೂ ಕರ್ತನ ಮನೆಯ ಬೊಕ್ಕಸದಲ್ಲಿಯೂ ಅರಸನ ಮನೆಯಲ್ಲಿಯೂ ಸಿಕ್ಕಿದ ಸಕಲ ಬಂಗಾರವನ್ನೂ ತಕ್ಕೊಂಡು ಅರಾಮ್ಯರ ಅರಸ ನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಯೆರೂಸಲೇಮನ್ನು ಬಿಟ್ಟುಹೋದನು.

Kannada Bible (Old Version), Bible Society of India.