2 ರಾಜರು 14

ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಹೊಡೆದು ಯುದ್ಧದಲ್ಲಿ ಸೆಲವನ್ನು ವಶಪಡಿಸಿಕೊಂಡು ಈ ದಿವಸದ ವರೆಗೂ ಯೊಕ್ತೆಯೇಲ್‌ ಎಂಬ ಹೆಸರಿಟ್ಟನು.

2 Kings 14:7 (UKJV) He slew of Edom in the valley of salt ten thousand, and took Selah by war, and called the name of it Joktheel unto this day.

5ರಾಜ್ಯವು ತನ್ನ ಕೈಯಲ್ಲಿ ಸ್ಥಿರಪಟ್ಟ ತರುವಾಯ ಅರಸ ನಾಗಿದ್ದ ತನ್ನ ತಂದೆಯನ್ನು ಕೊಂದ ತನ್ನ ಸೇವಕರನ್ನು ಕೊಂದುಹಾಕಿದನು.

6ಆದರೆ ತಂದೆಗಳು ತಮ್ಮ ಮಕ್ಕಳ ನಿಮಿತ್ತ ಸಾಯಬಾರದು; ಮಕ್ಕಳು ತಮ್ಮ ತಂದೆಗಳ ನಿಮಿತ್ತ ಸಾಯಬಾರದು; ಪ್ರತಿ ಮನುಷ್ಯನು ತನ್ನ ಪಾಪಕ್ಕೋಸ್ಕರ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ ಹಾಗೆ ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಹೊಡೆದವರ ಮಕ್ಕಳನ್ನು ಅವನು ಸಾಯಿಸ ಲಿಲ್ಲ.

7ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಹೊಡೆದು ಯುದ್ಧದಲ್ಲಿ ಸೆಲವನ್ನು ವಶಪಡಿಸಿಕೊಂಡು ಈ ದಿವಸದ ವರೆಗೂ ಯೊಕ್ತೆಯೇಲ್‌ ಎಂಬ ಹೆಸರಿಟ್ಟನು.

8ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು.

9ಆದರೆ ಇಸ್ರಾಯೇಲಿನ ಅರಸನಾದ ಯೆಹೋವಾಷನು ಯೆಹೂದದ ಅರಸ ನಾಗಿರುವ ಅಮಚ್ಯನಿಗೆ ಹೇಳಿ ಕಳುಹಿಸಿದ್ದೇನಂದರೆಲೆಬನೋನಿನಲ್ಲಿದ್ದ ಮುಳ್ಳು ಗಿಡವು ಲೆಬನೋನಿನ ಲ್ಲಿರುವ ದೇವದಾರಿಗೆ -- ನನ್ನ ಮಗನಿಗೆ ಹೆಂಡತಿ ಯಾಗಿರಲು ನೀನು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ ಆ ಮುಳ್ಳು ಗಿಡವನ್ನು ತುಳಿಯಿತು.

Kannada Bible (Old Version), Bible Society of India.