2 ರಾಜರು 16

ಆದರೆ ಕರ್ತನ ಸಮ್ಮುಖದಲ್ಲಿದ್ದ ಹಿತ್ತಾಳೆಯ ಬಲಿಪೀಠವನ್ನು ಅವನು ಮನೆಯ ಮುಂಭಾಗದಿಂದಲೂ ಕರ್ತನ ಮನೆಗೂ ಬಲಿಪೀಠಕ್ಕೂ ಮಧ್ಯದಿಂದಲೂ ತಂದು ಅದನ್ನು ಈ ಬಲಿಪೀಠಕ್ಕೆ ಉತ್ತರ ಪಾರ್ಶ್ವದಲ್ಲಿ ಇಟ್ಟನು.

2 Kings 16:14 (UKJV) And he brought also the brazen altar, which was before the LORD, from the forefront of the house, from between the altar and the house of the LORD, and put it on the north side of the altar.

12ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ನೋಡಿ ಬಲಿಪೀಠದ ಬಳಿಗೆ ಹೋಗಿ ಅದರ ಮೇಲೆ ಬಲಿ ಯನ್ನರ್ಪಿಸಿದನು.

13ಬಲಿಪೀಠದ ಮೇಲೆ ತನ್ನ ದಹನ ಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಸುಟ್ಟು ತನ್ನ ಪಾನಗಳನ್ನು ಹೊಯಿದನು. ಸಮಾಧಾನದ ಬಲಿ ಗಳ ರಕ್ತವನ್ನು ಚಿಮಿಕಿಸಿದನು.

14ಆದರೆ ಕರ್ತನ ಸಮ್ಮುಖದಲ್ಲಿದ್ದ ಹಿತ್ತಾಳೆಯ ಬಲಿಪೀಠವನ್ನು ಅವನು ಮನೆಯ ಮುಂಭಾಗದಿಂದಲೂ ಕರ್ತನ ಮನೆಗೂ ಬಲಿಪೀಠಕ್ಕೂ ಮಧ್ಯದಿಂದಲೂ ತಂದು ಅದನ್ನು ಈ ಬಲಿಪೀಠಕ್ಕೆ ಉತ್ತರ ಪಾರ್ಶ್ವದಲ್ಲಿ ಇಟ್ಟನು.

15ಇದಲ್ಲದೆ ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ --ಉದಯದಲ್ಲಿ ದಹನಬಲಿಯನ್ನೂ ಸಾಯಂಕಾಲದ ಆಹಾರ ಸಮರ್ಪಣೆಯನ್ನೂ ಅರಸನ ದಹನಬಲಿ ಯನ್ನೂ ಆಹಾರ ಅರ್ಪಣೆಯನ್ನೂ ದೇಶದ ಜನರೆಲ್ಲರ ದಹನಬಲಿಯನ್ನೂ ಅವರ ಆಹಾರ ಸಮರ್ಪಣೆ ಯನ್ನೂ ಪಾನಗಳನ್ನೂ ದೊಡ್ಡ ಬಲಿಪೀಠದ ಮೇಲೆ ಸುಟ್ಟು ದಹನಬಲಿಯ ರಕ್ತವೆಲ್ಲವನ್ನೂ ಬಲಿಯ ರಕ್ತವೆಲ್ಲವನ್ನೂ ಚಿಮಿಕಿಸು; ಆದರೆ ಹಿತ್ತಾಳೆ ಬಲಿಪೀಠವು ನಾನು ವಿಚಾರಿಸುವ ನಿಮಿತ್ತವಾಗಿ ಇರಲಿ ಎಂದು ಆಜ್ಞಾಪಿಸಿದನು.

16ಅರಸನಾದ ಆಹಾಜನು ಆಜ್ಞಾಪಿಸಿದ ಪ್ರಕಾರವೇ ಯಾಜಕನಾದ ಊರೀಯನು ಮಾಡಿದನು.

Kannada Bible (Old Version), Bible Society of India.