2 ರಾಜರು 16

ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ನೋಡಿ ಬಲಿಪೀಠದ ಬಳಿಗೆ ಹೋಗಿ ಅದರ ಮೇಲೆ ಬಲಿ ಯನ್ನರ್ಪಿಸಿದನು.

2 Kings 16:12 (UKJV) And when the king was come from Damascus, the king saw the altar: and the king approached to the altar, and offered thereon.

10ಅರಸನಾದ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ ಅಲ್ಲಿ ಒಂದು ಬಲಿಪೀಠವನ್ನು ಕಂಡನು. ಆಗ ಅರಸ ನಾದ ಆಹಾಜನು ಆ ಬಲಿಪೀಠದ ರೂಪವನ್ನೂ ಅದರ ಎಲ್ಲಾ ಕೈ ಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು.

11ಆಗ ಯಾಜಕನಾದ ಊರೀಯನು ಅರಸನಾದ ಆಹಾಜನು ದಮಸ್ಕದಿಂದ ಕಳುಹಿಸಿದ ಪ್ರಕಾರವೇ ಒಂದು ಬಲಿ ಪೀಠವನ್ನು ಕಟ್ಟಿಸಿದನು; ಹಾಗೆಯೇ ಅರಸನಾದ ಆಹಾಜನು ದಮಸ್ಕದಿಂದ ಬಂದಾಗ ಯಾಜಕನಾದ ಊರೀಯನು ಅದನ್ನು ಮಾಡಿಸಿದನು.

12ಅರಸನು ದಮಸ್ಕದಿಂದ ಬಂದ ಮೇಲೆ ಬಲಿಪೀಠವನ್ನು ನೋಡಿ ಬಲಿಪೀಠದ ಬಳಿಗೆ ಹೋಗಿ ಅದರ ಮೇಲೆ ಬಲಿ ಯನ್ನರ್ಪಿಸಿದನು.

13ಬಲಿಪೀಠದ ಮೇಲೆ ತನ್ನ ದಹನ ಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಸುಟ್ಟು ತನ್ನ ಪಾನಗಳನ್ನು ಹೊಯಿದನು. ಸಮಾಧಾನದ ಬಲಿ ಗಳ ರಕ್ತವನ್ನು ಚಿಮಿಕಿಸಿದನು.

14ಆದರೆ ಕರ್ತನ ಸಮ್ಮುಖದಲ್ಲಿದ್ದ ಹಿತ್ತಾಳೆಯ ಬಲಿಪೀಠವನ್ನು ಅವನು ಮನೆಯ ಮುಂಭಾಗದಿಂದಲೂ ಕರ್ತನ ಮನೆಗೂ ಬಲಿಪೀಠಕ್ಕೂ ಮಧ್ಯದಿಂದಲೂ ತಂದು ಅದನ್ನು ಈ ಬಲಿಪೀಠಕ್ಕೆ ಉತ್ತರ ಪಾರ್ಶ್ವದಲ್ಲಿ ಇಟ್ಟನು.

Kannada Bible (Old Version), Bible Society of India.