32ಹೀಗೆ ಅವರು ಕರ್ತನಿಗೆ ಭಯಪಟ್ಟು ತಮ್ಮಲ್ಲಿರುವ ನೀಚ ರೊಳಗೆ ಉನ್ನತ ಸ್ಥಾನಕ್ಕೋಸ್ಕರ ಯಾಜಕರನ್ನು ಮಾಡಿ ಕೊಂಡರು. ಇವರು ಉನ್ನತ ಸ್ಥಳಗಳ ಮೇಲಿರುವ ಮನೆಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು.
33ಅವರು ಕರ್ತನಿಗೆ ಭಯಪಟ್ಟು ಅವರು ಅಲ್ಲಿಂದ ಒಯ್ದು ಜನಾಂಗಗಳ ಪದ್ಧತಿಯ ಪ್ರಕಾರ ತಮ್ಮ ದೇವರುಗಳನ್ನು ಸೇವಿಸಿದರು.
34ಈ ದಿವಸದ ವರೆಗೂ ಅವರು ತಮ್ಮ ಪೂರ್ವದ ನ್ಯಾಯಗಳ ಪ್ರಕಾರ ಮಾಡುತ್ತಾರೆ; ಅವರು ಕರ್ತನಿಗೆ ಭಯಪಡದೆ ತಮ್ಮ ಕಟ್ಟಳೆಗಳ ಪ್ರಕಾರವಾಗಿಯೂ ತಮ್ಮ ನೀತಿಗಳ ಪ್ರಕಾರವಾಗಿಯೂ ನ್ಯಾಯಪ್ರಮಾ ಣದ ಪ್ರಕಾರವಾಗಿಯೂ ಕರ್ತನು ಇಸ್ರಾಯೇಲೆಂದು ಹೆಸರಿಟ್ಟ ಯಾಕೋಬನ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಯ ಪ್ರಕಾರವಾಗಿಯೂ ಮಾಡದೆ ಇದ್ದಾರೆ.
35ಕರ್ತನು ಅವರ ಸಂಗಡ ಒಡಂಬಡಿಕೆ ಮಾಡಿ ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನೀವು ಇತರ ದೇವರುಗಳಿಗೆ ಭಯಪಡದೆ ಅಡ್ಡಬೀಳದೆ ಸೇವಿಸದೆ ಅವುಗಳಿಗೆ ಬಲಿ ಯನ್ನು ಅರ್ಪಿಸದೆ ಇರ್ರಿ.
36ಆದರೆ ಮಹಾಶಕ್ತಿ ಯಿಂದಲೂ ಭುಜಪರಾಕ್ರಮದಿಂದಲೂ ಐಗುಪ್ತದೇಶ ದಿಂದ ನಿಮ್ಮನ್ನು ಬರಮಾಡಿದ ಕರ್ತನಿಗೆ ನೀವು ಭಯಪಟ್ಟು ಅಡ್ಡಬಿದ್ದು ಆತನಿಗೆ ಬಲಿಯನ್ನು ಅರ್ಪಿ ಸಿರಿ.