8ರಬ್ಷಾಕೆಯು ತಿರಿಗಿ ಹೋಗುತ್ತಿರುವಾಗ ಲಿಬ್ನದ ಮೇಲೆ ಯುದ್ಧಮಾಡುತ್ತಿರುವ ಅಶ್ಶೂರಿನ ಅರಸನನ್ನು ಕಂಡುಕೊಂಡನು. ಲಾಕೀಷನ್ನು ಬಿಟ್ಟನೆಂದು ಕೇಳಿದ್ದನು.
9ಆಗ ಅವನು ಕೂಷಿನ ಅರಸನಾದ ತಿರ್ಹಾಕನನ್ನು ಕುರಿತು--ಇಗೋ, ಅವನು ನಿನ್ನ ಮೇಲೆ ಯುದ್ಧ ಮಾಡಲು ಹೊರಟಿದ್ದಾನೆಂದು ಕೇಳಿದಾಗ ತಿರಿಗಿ ಹಿಜ್ಕೀ ಯನ ಬಳಿಗೆ ಸೇವಕರನ್ನು ಕಳುಹಿಸಿ ಹೇಳಿದ್ದೇನಂದರೆ
10ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ--ಯೆರೂಸಲೇಮು ಅಶ್ಶೂ ರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸ ದಿರಲಿ.
11ಇಗೋ, ಅಶ್ಶೂರಿನ ಅರಸುಗಳು ಎಲ್ಲಾ ದೇಶಗಳನ್ನು ಶಾಪಕೊಟ್ಟು ನಿರ್ಮೂಲ ಮಾಡಿದ ವರ್ತ ಮಾನವನ್ನು ಕೇಳಿದಿ. ಆದರೆ ನೀನು ತಪ್ಪಿಸಿಕೊಳ್ಳು ವಿಯೋ?
12ನನ್ನ ತಂದೆಗಳು ಹಾಳು ಮಾಡಿದ ಗೋಜಾನ್, ಖಾರಾನ್, ರೆಚೆಫ್, ತೆಲಸ್ಸಾರ್‌ನಲ್ಲಿದ್ದ ಎದೆನಿನ ಮಕ್ಕಳು,