12ನನ್ನ ತಂದೆಗಳು ಹಾಳು ಮಾಡಿದ ಗೋಜಾನ್, ಖಾರಾನ್, ರೆಚೆಫ್, ತೆಲಸ್ಸಾರ್‌ನಲ್ಲಿದ್ದ ಎದೆನಿನ ಮಕ್ಕಳು,
13ಈ ಜನಾಂಗಗಳ ದೇವರುಗಳು ಅವರನ್ನು ತಪ್ಪಿಸಿ ಬಿಟ್ಟರೋ? ಹಮಾತಿನ ಅರಸನೂ ಅರ್ಫಾದಿನ ಅರಸನೂ ಸೆಫರ್ವಯಿಮ್ ಪಟ್ಟಣದ, ಹೇನ, ಇವ್ವಾ ಅರಸನೂ ಎಲ್ಲಿ ಎಂಬದೇ.
14ಹಿಜ್ಕೀ ಯನು ಸೇವಕರ ಕೈಯಿಂದ ಪತ್ರವನ್ನು ತಕ್ಕೊಂಡು ಓದಿದಾಗ ಹಿಜ್ಕೀಯನು ಕರ್ತನ ಮನೆಗೆ ಹೋಗಿ ಅದನ್ನು ಕರ್ತನ ಮುಂದೆ ಹಾಸಿದನು.
15ಇದಲ್ಲದೆ ಹಿಜ್ಕೀಯನು ಕರ್ತನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಕೆರೂಬಿಗಳ ಮಧ್ಯದಲ್ಲಿ ವಾಸ ವಾಗಿರುವ ಇಸ್ರಾಯೇಲಿನ ದೇವರಾದ ಕರ್ತನೇ, ನೀನೊಬ್ಬನೇ ಭೂಮಿಯ ಎಲ್ಲಾ ರಾಜ್ಯಗಳಿಗೆ ದೇವ ರಾಗಿದ್ದೀ.
16ನೀನೇ ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ್ದೀ. ಕರ್ತನೇ, ಕಿವಿ ಕೊಟ್ಟು ಕೇಳು; ಕರ್ತನೆ, ಕಣ್ಣುಗಳನ್ನು ತೆರೆದುನೋಡು. ಸನ್ಹೇರೀಬನು ಜೀವವುಳ್ಳ ದೇವರನ್ನು ನಿಂದಿಸಿ ಕಳುಹಿಸಿದ ಮಾತು ಗಳನ್ನು ಕೇಳು.