2 ರಾಜರು 23

ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.

2 Kings 23:14 (UKJV) And he brake in pieces the images, and cut down the groves, and filled their places with the bones of men.

12ಯೆಹೂದದ ಅರಸರು ಉಂಟು ಮಾಡಿದ ಆಹಾಜನ ಮೇಲು ಮಾಳಿಗೆಯ ಮೇಲೆ ಇದ್ದ ಬಲಿಪೀಠಗಳನ್ನೂ ಮನಸ್ಸೆಯು ಕರ್ತನ ಮನೆಯ ಎರಡು ಅಂಗಳಗಳಲ್ಲಿ ಮಾಡಿದ ಬಲಿಪೀಠ ಗಳನ್ನೂ ಅರಸನು ಕೆಡವಿಸಿ ಅಲ್ಲಿಂದ ಅದರ ಧೂಳನ್ನು ಕಿದ್ರೋನ್‌ ಹಳ್ಳದಲ್ಲಿ ಹಾಕಿಸಿದನು.

13ಇದಲ್ಲದೆ ಯೆರೂಸಲೇಮಿನ ಮುಂದೆ ಮೋಸದ ಬೆಟ್ಟದ ಬಲ ಪಾರ್ಶ್ವದಲ್ಲಿದ್ದ ಚೀದೋನ್ಯರ ಅಸಹ್ಯಕರವಾದ ಅಷ್ಟೋ ರೆತಿಗೂ ಮೋವಾಬ್ಯರ ಅಸಹ್ಯಕರವಾದ ಕೆಮೋಷ ನಿಗೂ ಅಮ್ಮೋನಿನ ಮಕ್ಕಳ ಅಸಹ್ಯಕರವಾದ ಮಿಲ್ಕೋ ಮ್‌ನಿಗೂ ಇಸ್ರಾಯೇಲಿನ ಅರಸನಾದ ಸೊಲೊ ಮೋನನು ಕಟ್ಟಿಸಿದ ಉನ್ನತ ಸ್ಥಳಗಳನ್ನೂ ಅರಸನು ಹೊಲೆಮಾಡಿ

14ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.

15ಇದಲ್ಲದೆ ಬೇತೇಲಿನಲ್ಲಿದ್ದ ಬಲಿಪೀಠವನ್ನೂ ಇಸ್ರಾಯೇಲ್ಯರು ಪಾಪಮಾಡಲು ಪ್ರೇರೇಪಿಸಿದ ನೆಬಾ ಟನ ಮಗನಾದ ಯಾರೊಬ್ಬಾಮನು ಮಾಡಿದ ಉನ್ನತ ಸ್ಥಳವನ್ನೂ ಅವನು ಕೆಡವಿಹಾಕಿ ಸುಟ್ಟ್ಟು ಅದನ್ನು ಧೂಳಾ ಗಲು ಪುಡಿಮಾಡಿ ವಿಗ್ರಹದ ತೋಪನ್ನು ಸುಡಿಸಿದನು.

16ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಕಳುಹಿಸಿ, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು ಈ ಮಾತುಗಳನ್ನು ಪ್ರಕಟಿಸಿದ ದೇವರ ಮನುಷ್ಯನು ಸಾರಿದ ಕರ್ತನ ವಾಕ್ಯದ ಪ್ರಕಾರ ಬಲಿಪೀಠದ ಮೇಲೆ ಅವುಗಳನ್ನು ಸುಟ್ಟುಬಿಟ್ಟು ಅದನ್ನು ಹೊಲೆಮಾಡಿದನು.

Kannada Bible (Old Version), Bible Society of India.