2 ರಾಜರು 25

ಅವನು ಜೀವದಿಂದಿರುವ ವರೆಗೂ ಅರಸನ ಸಮ್ಮುಖದಲ್ಲಿ ರೊಟ್ಟಿಯನ್ನು ಯಾವಾಗಲೂ ತಿನ್ನುತ್ತಾ ಇದ್ದನು.

2 Kings 25:29 (UKJV) And changed his prison garments: and he did eat bread continually before him all the days of his life.

27ಆದರೆ ಯೆಹೂದದ ಅರಸನಾದ ಯೆಹೋ ಯಾಖೀನನ ಸೆರೆಯ ಮೂವತ್ತೇಳನೇ ವರುಷದ ಹನ್ನೆರಡನೇ ತಿಂಗಳಿನ ಇಪ್ಪತ್ತೇಳನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ಎವಿಲ್ಮೆ ರೋದಕನು ಆಳಲು ಆರಂಭಿಸಿದ ವರುಷದಲ್ಲಿ ಅವನು ಯೆಹೂದದ ಅರಸನಾದ ಯೆಹೋಯಾ ಖೀನನನ್ನು ಸೆರೆಮನೆಯಿಂದ ಬಿಡಿಸಿ

28ಅವನ ಸಂಗಡ ಒಳ್ಳೇ ಮಾತುಗಳನ್ನು ಆಡಿ, ಅವನ ಸಿಂಹಾಸನವನ್ನು ಬಾಬೆಲಿನಲ್ಲಿ ತನ್ನ ಸಂಗಡ ಇರುವ ಅರಸುಗಳ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಿ ಅವನ ಸೆರೆ ವಸ್ತ್ರಗಳನ್ನು ಬದಲಾಯಿಸಿದನು.

29ಅವನು ಜೀವದಿಂದಿರುವ ವರೆಗೂ ಅರಸನ ಸಮ್ಮುಖದಲ್ಲಿ ರೊಟ್ಟಿಯನ್ನು ಯಾವಾಗಲೂ ತಿನ್ನುತ್ತಾ ಇದ್ದನು.

30ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು.

Kannada Bible (Old Version), Bible Society of India.