4ಮೋವಾಬಿನ ಅರಸನಾದ ಮೇಷನು ಕುರಿಮಂದೆ ಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ ಉಣ್ಣೆ ಸಹಿತವಾಗಿ ಒಂದು ಲಕ್ಷ ಟಗರುಗಳನ್ನೂ ಕಪ್ಪವಾಗಿ ಕೊಡುತ್ತಿದ್ದನು.
5ಅಹಾ ಬನು ಸತ್ತ ತರುವಾಯ ಏನಾಯಿತಂದರೆ, ಮೋವಾ ಬಿನ ಅರಸನು ಇಸ್ರಾಯೇಲಿನ ಅರಸನಿಗೆ ವಿರೋಧ ವಾಗಿ ತಿರುಗಿಬಿದ್ದನು.
6ಆ ದಿನದಲ್ಲಿ ಯೋರಾಮನು ಸಮಾರ್ಯದಿಂದ ಹೊರಟು ಹೋಗಿ ಇಸ್ರಾಯೇಲ್ಯರನ್ನು ಲೆಕ್ಕಿಸಿದನು.
7ಇದಲ್ಲದೆ ಅವನು ಹೋಗಿಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾನೆ; ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವಿಯೋ ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿ ದನು. ಅದಕ್ಕವನು--ನಾನು ಬರುವೆನು; ನಾನು ನಿನ್ನ ವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳಂತೆಯೇ ಅಂದನು.
8ಅದಕ್ಕೆ ಯಾವ ಮಾರ್ಗವಾಗಿ ಹೋಗೋಣ ಎಂದು ಇವನು ಕೇಳಿದಾಗ ಅವನು--ಎದೋಮಿನ ಅರಣ್ಯ ಮಾರ್ಗವಾಗಿ ಅಂದನು.