15ಆಗ ಅವನೂ ಅವನ ಎಲ್ಲಾ ಪರಿವಾರದವರೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ನಿಂತು--ಇಗೋ, ಇಸ್ರಾಯೇ ಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು; ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತಕ್ಕೋ ಅಂದನು.
16ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು.
17ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು.
18ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.
19ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು.