2 ರಾಜರು 5

ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು.

2 Kings 5:16 (UKJV) But he said, As the LORD lives, before whom I stand, I will receive none. And he urged him to take it; but he refused.

14ಆಗ ಅವನು ಇಳಿದುಹೋಗಿ ದೇವರ ಮನುಷ್ಯನ ವಾಕ್ಯದ ಪ್ರಕಾರ ಯೊರ್ದನಿನಲ್ಲಿ ಏಳುಸಾರಿ ಮುಣುಗಿದನು; ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು; ಅವನು ಶುದ್ಧನಾದನು.

15ಆಗ ಅವನೂ ಅವನ ಎಲ್ಲಾ ಪರಿವಾರದವರೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ನಿಂತು--ಇಗೋ, ಇಸ್ರಾಯೇ ಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು; ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತಕ್ಕೋ ಅಂದನು.

16ಆದರೆ ಅವನುನಾನು ಯಾವಾತನ ಮುಂದೆ ನಿಲ್ಲುತ್ತೇನೋ ಆ ಕರ್ತನ ಜೀವದಾಣೆ, ನಾನು ಏನೂ ತಕ್ಕೊಳ್ಳುವದಿಲ್ಲ ಅಂದ ನು. ಅವನು ತಕ್ಕೊಳ್ಳಬೇಕೆಂದು ನಾಮಾನನು ಬಲವಂತ ಮಾಡಿದರೂ ಬೇಡ ಅಂದನು.

17ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು.

18ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.

Kannada Bible (Old Version), Bible Society of India.