2 ರಾಜರು 5

ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗ ಡಲೂ ರಥದ ಸಂಗಡಲೂ ಬಂದು ಎಲೀಷನ ಮನೆಯ ಬಾಗಲ ಬಳಿಯಲ್ಲಿ ನಿಂತನು.

2 Kings 5:9 (UKJV) So Naaman came with his horses and with his chariot, and stood at the door of the house of Elisha.

7ಇಸ್ರಾಯೇಲ್ಯರ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು--ಕೊಲ್ಲು ವದಕ್ಕೂ ಬದುಕಿಸುವದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ತಪ್ಪಿಸಿ ವಾಸಿಮಾಡುವದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧ ವಾಗಿ ಜಗಳಕ್ಕೆ ಕಾರಣ ಹುಡುಕುವದನ್ನು ನೀವು ನೋಡಿ ತಿಳುಕೊಳ್ಳಿರಿ ಅಂದನು.

8ಇಸ್ರಾಯೇಲ್ಯರ ಅರಸನು ತನ್ನ ವಸ್ತ್ರಗಳನ್ನು ಹರಿದು ಕೊಂಡನೆಂದು ದೇವರ ಮನುಷ್ಯನಾದ ಎಲೀಷನು ಕೇಳಿದಾಗ--ನೀನು ನಿನ್ನ ವಸ್ತ್ರಗಳನ್ನು ಹರಿದುಕೊಂಡ ದ್ದೇನು? ಇಸ್ರಾಯೇಲಿನಲ್ಲಿ ಪ್ರವಾದಿ ಇದ್ದಾನೆಂದು ಅವನು ತಿಳುಕೊಳ್ಳುವ ಹಾಗೆ ಅವನು ನನ್ನ ಬಳಿಗೆ ಬರಲಿ ಎಂದು ಅರಸನಿಗೆ ಹೇಳಿ ಕಳುಹಿಸಿದನು.

9ಹಾಗೆಯೇ ನಾಮಾನನು ತನ್ನ ಕುದುರೆಗಳ ಸಂಗ ಡಲೂ ರಥದ ಸಂಗಡಲೂ ಬಂದು ಎಲೀಷನ ಮನೆಯ ಬಾಗಲ ಬಳಿಯಲ್ಲಿ ನಿಂತನು.

10ಆಗ ಎಲೀಷನುನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪ ಡುವದು; ನೀನು ಶುದ್ಧನಾಗುವಿ ಎಂದು ಹೇಳಿ ಅವನ ಬಳಿಗೆ ಸೇವಕನನ್ನು ಕಳುಹಿಸಿದನು.

11ಆಗ ನಾಮಾ ನನು ರೌದ್ರಗೊಂಡು ಹೊರಟು ಹೋಗಿ--ಇಗೋ, ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು ತನ್ನ ದೇವರಾದ ಕರ್ತನ ಹೆಸರನ್ನು ಕರೆದು ಆ ಸ್ಥಳದ ಮೇಲೆ ತನ್ನ ಕೈಯಾಡಿಸಿ ಕುಷ್ಠರೋಗವನ್ನು ವಾಸಿ ಮಾಡುವನೆಂದು ನಾನು ಯೋಚಿಸಿಕೊಂಡೆನು.

Kannada Bible (Old Version), Bible Society of India.