2 ರಾಜರು 6

ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.

2 Kings 6:33 (UKJV) And while he yet talked with them, behold, the messenger came down unto him: and he said, Behold, this evil is of the LORD; what should I wait for the LORD any longer?

31ಆಗ ಅವನು -- ಶಾಫಾಟನ ಮಗನಾದ ಎಲೀಷನ ತಲೆಯು ಈ ದಿನ ಅವನ ಮೇಲೆ ಇದ್ದರೆ ದೇವರು ನನಗೆ ಇದರಂತೆಯೂ ಇನ್ನು ಹೆಚ್ಚಾಗಿಯೂ ಮಾಡಲಿ ಅಂದನು.

32ಎಲೀಷನು ಹಿರಿಯರ ಜೊತೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು; ಆಗ ಅರಸನು ತನ್ನ ಬಳಿಯಿಂದ ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಸೇವಕನು ಎಲೀಷನ ಬಳಿಗೆ ಬರುವದಕ್ಕಿಂತ ಮುಂಚೆ ಅವನು ಹಿರಿಯರಿಗೆ--ಈ ಕೊಲೆಪಾತಕನ ಮಗನು ನನ್ನ ತಲೆ ಯನ್ನು ತೆಗೆಯುವದಕ್ಕೆ ಕಳುಹಿಸಿದ್ದನ್ನು ನೋಡಿದಿರೋ? ನೋಡಿರಿ; ಆ ಸೇವಕನು ಬಂದ ಕೂಡಲೆ ಬಾಗಲು ಮುಚ್ಚಿ ಬಾಗಲ ಬಳಿಯಲ್ಲಿ ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಅವನ ಯಜಮಾನನ ಪಾದಗಳ ಶಬ್ದವು ಅವನ ಹಿಂದೆ ಇಲ್ಲವೋ ಅಂದನು.

33ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.

Kannada Bible (Old Version), Bible Society of India.