21ಆದದರಿಂದ ಯೆಹೋ ರಾಮನು ತನ್ನ ಬಳಿಯಲ್ಲಿದ್ದ ಎಲ್ಲಾ ರಥಗಳನ್ನು ತಕ್ಕೊಂಡು ಚಾಯಾರಿಗೆ ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನು ಸುತ್ತಿಕೊಂಡಿದ್ದ ಎದೋಮ್ಯರನ್ನೂ ರಥಗಳ ಯಜಮಾನರನ್ನೂ ಸಂಹರಿಸಿದನು.
22ಜನರು ತಮ್ಮ ಡೇರೆಗಳಿಗೆ ಓಡಿಹೋದರು. ಆದರೆ ಎದೋಮು ಯೆಹೂದದ ಕೈಕೆಳಗೆ ಇರದ ಹಾಗೆ ಅಂದಿನಿಂದ ಈ ವರೆಗೂ ತಿರುಗಿ ಬಿತ್ತು. ಆ ಕಾಲ ದಲ್ಲಿಯೇ ಲಿಬ್ನ ತಿರುಗಿ ಬಿತ್ತು.
23ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪ ಡಲಿಲ್ಲವೋ?
24ಯೆಹೋರಾಮನು ತನ್ನ ಪಿತೃಗಳ ಬಳಿಯಲ್ಲಿ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.
25ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಹನ್ನೆರಡನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಆಳಲಾರಂಭಿಸಿದನು.