2 ರಾಜರು 8

ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಹನ್ನೆರಡನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಆಳಲಾರಂಭಿಸಿದನು.

2 Kings 8:25 (UKJV) In the twelfth year of Joram the son of Ahab king of Israel did Ahaziah the son of Jehoram king of Judah begin to reign.

23ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪ ಡಲಿಲ್ಲವೋ?

24ಯೆಹೋರಾಮನು ತನ್ನ ಪಿತೃಗಳ ಬಳಿಯಲ್ಲಿ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.

25ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಹನ್ನೆರಡನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಆಳಲಾರಂಭಿಸಿದನು.

26ಅಹ ಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿದನು. ಅವನ ತಾಯಿ ಅತಲ್ಯಳು; ಅವಳು ಇಸ್ರಾ ಯೇಲಿನ ಅರಸನಾದ ಒಮ್ರಿಯ ಮಗಳು.

27ಅವನು ಅಹಾಬನ ಮನೆಯ ಮಾರ್ಗದಲ್ಲಿ ನಡೆದು ಅಹಾಬನ ಮನೆಯವರ ಹಾಗೆ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಯಾಕಂದರೆ ಅವನು ಅಹಾಬನ ಅಳಿಯನಾಗಿದ್ದನು.

Kannada Bible (Old Version), Bible Society of India.