2 ರಾಜರು 8

ಅಹ ಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿದನು. ಅವನ ತಾಯಿ ಅತಲ್ಯಳು; ಅವಳು ಇಸ್ರಾ ಯೇಲಿನ ಅರಸನಾದ ಒಮ್ರಿಯ ಮಗಳು.

2 Kings 8:26 (UKJV) Two and twenty years old was Ahaziah when he began to reign; and he reigned one year in Jerusalem. And his mother's name was Athaliah, the daughter of Omri king of Israel.

24ಯೆಹೋರಾಮನು ತನ್ನ ಪಿತೃಗಳ ಬಳಿಯಲ್ಲಿ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.

25ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಹನ್ನೆರಡನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಆಳಲಾರಂಭಿಸಿದನು.

26ಅಹ ಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿದನು. ಅವನ ತಾಯಿ ಅತಲ್ಯಳು; ಅವಳು ಇಸ್ರಾ ಯೇಲಿನ ಅರಸನಾದ ಒಮ್ರಿಯ ಮಗಳು.

27ಅವನು ಅಹಾಬನ ಮನೆಯ ಮಾರ್ಗದಲ್ಲಿ ನಡೆದು ಅಹಾಬನ ಮನೆಯವರ ಹಾಗೆ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಯಾಕಂದರೆ ಅವನು ಅಹಾಬನ ಅಳಿಯನಾಗಿದ್ದನು.

28ಅವನು ಅಹಾಬನ ಮಗನಾದ ಯೋರಾಮನ ಸಂಗಡ ಗಿಲ್ಯಾದಿನಲ್ಲಿರುವ ರಾಮೋ ತಿಗೆ ಅರಾಮ್ಯರ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದರು.

Kannada Bible (Old Version), Bible Society of India.